ಹೊಸದಿಲ್ಲಿ: ಕೆಲವೇ ವರ್ಷಗಳಲ್ಲಿ ಚೆನ್ನೈ ಮತ್ತು ಮೈಸೂರು ನಡುವೆ ಬುಲೆಟ್ ರೈಲು ಸಂಚರಿಸುವ ಸಾಧ್ಯತೆಗಳಿವೆ.
ದೇಶದಲ್ಲಿ ಹೈಸ್ಪೀಡ್ ಬುಲೆಟ್ ರೈಲು ಸಂಚಾರದ ಬೃಹತ್ ಜಾಲವನ್ನು ನಿರ್ಮಿಸಲು ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿರಿಸಿದೆ.
ಚೆನ್ನೈ- ಮೈಸೂರು ಸಹಿತ 7 ಹೊಸ ಮಾರ್ಗಗಳಲ್ಲಿ ಹಳಿ ನಿರ್ಮಿಸುವ ಸಂಬಂಧ ಹೆಚ್ಚುವರಿ ಭೂಮಿ ಸ್ವಾಧೀನ ಪ್ರಕ್ರಿಯೆಗೆ ರೈಲ್ವೇ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಈ ಯೋಜನೆಗೆ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಚೆನ್ನೈ – ಮೈಸೂರು ರೈಲು ಮಾರ್ಗವೂ ಸೇರಿದಂತೆ ಒಟ್ಟು ಏಳು ಬುಲೆಟ್ ಟ್ರೈನ್ ರಸ್ತೆಗಳಿಗೆ ಭಾರತೀಯ ರೈಲ್ವೇ ನೀಲ ನಕ್ಷೆಯನ್ನು ಸಿದ್ಧಪಡಿಸಿದೆ.