Advertisement

ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು

03:06 PM Jun 03, 2021 | Team Udayavani |

ಚಾಮರಾಜನಗರ: ಒಂದೇ ಕುಟುಂಬದನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆತಾಲೂಕಿನ ಎಚ್‌. ಮೂಕಹಳ್ಳಿಯಲ್ಲಿ ಬುಧವಾರಜರುಗಿದೆ. ಗ್ರಾಮದ ಮಹದೇವಪ್ಪ (47),ಅವರ ಪತ್ನಿ ಮಂಗಳಮ್ಮ (40) ಅವರಮಕ್ಕಳಾದ ಜ್ಯೋತಿ (14), ಶ್ರುತಿ (12) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಬುಧವಾರ ಬೆಳಗ್ಗೆ ಗ್ರಾಮದವರೊಬ್ಬರುಮಹಾದೇವಪ್ಪ ಅವರನ್ನುಕಬ್ಬಿನ ತೊಂಡೆ ತರುವಸಲುವಾಗಿ ಕರೆಯಲು ಹೋದಾಗ ಬಾಗಿಲುತೆರೆಯಲಿಲ್ಲ. ಮನೆಯೊಳಗಿನಿಂದ ಯಾವುದೇಶಬ್ದ ಬರಲಿಲ್ಲ. ಆಗ ಮನೆಯ ಮೇಲೆ ಹತ್ತಿಹೆಂಚು ತೆರೆದು ನೋಡಿದಾಗ, ನಾಲ್ವರೂ ನೇಣುಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.ಮಹಾದೇವಪ್ಪಅವರಿಗೆಮೂವರುಪುತ್ರಿಯರಿದ್ದು, ಹಿರಿಯ ಪುತ್ರಿಗೆ ವಿವಾಹವಾಗಿದೆ. ಇನ್ನಿಬ್ಬರು ಹೆಣ್ಣು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು.

ಕುಟುಂಬದ ಮುಖ್ಯಸ್ಥ ಮಹಾದೇವಪ್ಪಒಂದೂವರೆ ಎಕರೆ ಮಳೆ ಆಶ್ರಿತ ಜಮೀನುಹೊಂದಿದ್ದು,ಕೂಲಿ ಕಾರ್ಮಿಕರಾಗಿದ್ದರು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು.

ಸಾಮಾಜಿಕ ಅಂತರದಭಯ ಕಾಡಿತ್ತಾ?

ಮಹದೇವಪ್ಪ ಅವರಿಗೆ ಕೋವಿಡ್‌ ಪಾಸಿಟಿವ್‌ಆಗಿ, ಗುಣಮುಖರಾಗಿ 20 ದಿನಗಳಾಗಿತ್ತು.ಮನೆಯ ಉಳಿದ ಸದಸ್ಯರಿಗೆ ಸೋಂಕು ತಗುಲಿರಲಿಲ್ಲ. ಸೋಂಕು ಬಂದು ಚೇತರಿಸಿಕೊಂಡಿದ್ದರೂ, ಸಾಮಾಜಿಕವಾಗಿ ಜನ ತಮ್ಮನ್ನುದೂರ ಇಡಬಹುದೆಂಬ ಆತಂಕ ಮಹದೇವಪ್ಪಅವರಿಗಿತ್ತು ಎನ್ನಲಾಗಿದೆ.

Advertisement

ಕೋವಿಡ್‌ ಬಂದು ಗುಣಮುಖರಾದ ನಂತರವೂ ಅವರು,ಮನೆಯೊಳಗೇ ಇದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಹದೇವಪ್ಪ ಮಂಗಳವಾರ ರಾತ್ರಿ9ಗಂಟೆ ಸಮಯದಲ್ಲಿ ಗ್ರಾಮದಕುಮಾರ್‌ ಎಂಬುವರ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ.

ಆ ಸಂದರ್ಭದಲ್ಲಿ ಫೋನಿನಿಂದ ಮಾತನಾಡಿದರೂ ಕೊರೊನಾ ಹರಡುತ್ತದೆಯೇ ಎಂದುಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ. ಯಾರು ನಿನಗೆ ಹೇಳಿದ್ದು? ಆ ರೀತಿ ಏನೂ ಆಗಲ್ಲ ಎಂದುಕುಮಾರ್‌ ಸಮಾಧಾನ ಹೇಳಿದ್ದಾರೆ. ಆಗ ಆತ ಯಾವುದೇ ಸಮಸ್ಯೆ ತಿಳಿಸಲಿಲ್ಲ. ಆತನಿಗೆ ಒಂದುತಿಂಗಳ ಹಿಂದೆಕೋವಿಡ್‌ ಬಂದು ಗುಣಮುಖನಾಗಿದ್ದ. ನಾನೇ ಚಿಕಿತ್ಸೆ ಗೆ ಸಹಾಯ ಮಾಡಿದ್ದಾರೆ ಎಂದುಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next