ಉಡುಪಿ: ಜಿಲ್ಲೆಯ ಉಪ್ಪುಂದ ಗ್ರಾಮದ ಮಡಿಕಲ್ ಕರಾವಳಿ ತೀರದಲ್ಲಿ ಕಳೆದ ಒಂದು ವಾರದಿಂದ ಪ್ರಾರಂಭವಾದ ಕಡಲ್ಕೊರೆತ ವಿಪರೀತವಾಗಿದೆ.
ಈ ಕಡಲ್ಕೊರೆತದ ಪರಿಣಾಮವಾಗಿ ಮೀನುಗಾರಿಕೆ ಕುಟುಂಬಕ್ಕೆ ಸೇರಿದ ಕೆಲವು ಮನೆಗಳು ಸಮುದ್ರ ಪಾಲಾಗುವ ಅಂಚಿಗೆ ಬಂದು ಮುಟ್ಟಿದೆ.
ಇದನ್ನೂ ಓದಿ:ಕೋವಿಡ್ ಆಸ್ಪತ್ರೆಯಲ್ಲಿ ಆರೈಕೆ ಸಿಗದ್ದಕ್ಕೆ ಸಿಡಿದೆದ್ದ ಸೋಂಕಿತರು
ಹವಾಮಾನ ಇಲಾಖೆಯಿಂದ ಕೊಟ್ಟ ಮಾಹಿತಿಯಂತೆ ಇನ್ನೂ ಎರಡು ದಿನ ಅಪಾಯಕಾರಿ ಚಂಡಮಾರುತ ಬರುವ ಮುನ್ಸೂಚನೆ ಇರುವುದರಿಂದ ತಕ್ಷಣ ತಾತ್ಕಾಲಿಕ ಅಡೆತಡೆಯ ಅವಶ್ಯಕತೆ ಇದೆ.
ಇನ್ನು ಮರವಂತೆಯಲ್ಲೂ ಕೂಡಾ ಕಡಲ್ಕೊರೆತ ತೀವ್ರಗೊಂಡಿದ್ದು, ಪರಿಣಾಮ ತೆಂಗಿನ ಮರಗಳು, ಮೀನುಗಾರಿಕಾ ಶೆಡ್ ಸಮುದ್ರಪಾಲಾಗಿದೆ. ಅಲ್ಲದೆ ಕಾಂಕ್ರೀಟ್ ರಸ್ತೆಗೂ ಅಲೆಗಳು ಅಪ್ಪಳಿಸುತ್ತಿವೆ.