Advertisement

ಶಸ್ತ್ರಸ್ತ್ರ ಸ್ವಚ್ಛಗೊಳಿಸುವ ವೇಳೆ ಗುಂಡು ಸಿಡಿದು  ಪೇದೆ ಸಾವು

02:57 PM Mar 23, 2021 | Team Udayavani |

ನವದೆಹಲಿ: ಪೊಲೀಸ್ ಪೇದೆಯೊಬ್ಬ ತನ್ನ ಬಳಿ ಇರುವ AK-47 ಶಸ್ತ್ರಸ್ತ್ರ ವನ್ನು ಸ್ವಚ್ಛಗೊಳಿಸುವ ವೇಳೆ ದುರಾದೃಷ್ಟವಶಾತ್ ಶಸ್ತ್ರಸ್ತ್ರದಿಂದ ಗುಂಡು ಸಿಡಿದು ಮೃತಪಟ್ಟಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

Advertisement

ಸಾವಿಗೀಡಾದ ವ್ಯಕ್ತಿಯನ್ನು ಜೋಗೀಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಪಂಜಾಬ್ ಬಿಜೆಪಿ ವಕ್ತಾರ ಅನಿಲ್ ಸರೀನ್ ಅವರ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಕುಲಾಲ ಭವನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ದೇವದಾಸ್‌ ಎಲ್‌. ಕುಲಾಲ್‌

ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಜಿತೇಂದ್ರ ಕುಮಾರ್, ಪೊಲೀಸ್ ಪೇದೆಯು ಟಾಗೋರ್ ನಗರದಲ್ಲಿರುವ ಅನಿಲ್ ಸರೀನ್ ಅವರ ನಿವಾಸದಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದ್ದ.  ಈ ಸಮಯದಲ್ಲಿ ತನ್ನಲ್ಲಿದ್ದ AK-47 ಶಸ್ತ್ರಸ್ತ್ರ ವನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಶಸ್ತ್ರಸ್ತ್ರದ ಗುಂಡು ಆತನ ಗಲ್ಲವನ್ನು ಸೀಳುವ ಮೂಲಕ ತಲೆಯನ್ನು ಹಾದುಹೋಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.

ಇದನ್ನೂ ಓದಿ:ತಲೈವಿ ಟ್ರೈಲರ್ : ಜಯಲಲಿತ ಅವರ ಜೀವನ ಪಯಣ : ಸಿನೆಮಾ ಟು ರಾಜಕಾರಣ  

Advertisement
Advertisement

Udayavani is now on Telegram. Click here to join our channel and stay updated with the latest news.

Next