Advertisement

ಮಾಜಿ ಪತಿಯನ್ನು ಕುರ್ಚಿಗೆ ಕಟ್ಟಿ ಹಾಕಿ, ಕತ್ತು ಸೀಳಿ ಕೊಲೆಗೈದ ಮಹಿಳೆ

08:32 PM Mar 14, 2021 | Team Udayavani |

ನಾಗ್ಪುರ: 31 ವರ್ಷದ ಮಹಿಳೆಯೊಬ್ಬಳು  ತನ್ನ 65 ವರ್ಷದ ಮಾಜಿ ಪತಿಯನ್ನು ಕುರ್ಚಿಗೆ ಕಟ್ಟಿ, ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು,  ಆರೋಪಿತ ಮಹಿಳೆ ಮೃತ ವ್ಯಕ್ತಿಯನ್ನು ತಮ್ಮ ಮಾಜಿ ಗಂಡ ಎಂದು ಹೇಳಿಕೊಂಡಿದ್ದು, ತಾನು ಆತನಿಂದ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಹಾಗಾಗಿ  ಸೇಡು ತೀರಿಸಿಕೊಳ್ಳಲು ಆತನಿಗೆ ಲೈಂಗಿಕ ಆಸಕ್ತಿ ಮೂಡಿಸಿ ಆತನನ್ನು ತನ್ನತ್ತ ಕರೆಸಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

ಘಟನೆಯ ವಿವರ:

ಮೃತ ವ್ಯಕ್ತಿ ಈ ಹಿಂದೆ ESIC ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು,  ಈಗಾಗಲೇ ಆತ ಐದು ಜನ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ. ಆ ಮಹಿಳೆಯರಲ್ಲಿ ಆರೋಪಿ ನಾಲ್ಕನೆಯವಳಾಗಿದ್ದಳು ಎನ್ನಲಾಗಿದ್ದು, ಈಕೆ 8 ವರ್ಷದ ಮಗನನ್ನು ಹೊಂದಿದ್ದಳು.

ಇದನ್ನೂ ಓದಿ:ನನ್ನ ಮಗ ತಪ್ಪು ಮಾಡಿಲ್ಲ : ಭಾಲ್ಕಿ ಯುವಕನ ತಾಯಿಯ ಆಕ್ರಂದನ

Advertisement

ಈ ನಡುವೆ ಆರೋಪಿ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದು, 3 ತಿಂಗಳ ಮಗುವನ್ನು ಹೊಂದಿದ್ದಳು ಎಂದು ತಿಳಿದುಬಂದಿದೆ. ಹೀಗಿರುವಾಗ ಹತ್ಯೆಗೀಡಾದ  ಆಕೆಯ ಮಾಜಿ ಪತಿಯು ತನ್ನ ATM  ಕಾರ್ಡ್ ಹಾಗೂ ಪಿಂಚಣಿ ಹಣವನ್ನು ಹಿಂದಿರುಗಿಸುವಂತೆ ಪತ್ನಿಯಲ್ಲಿ ಪದೇ ಪದೇ ಕೇಳಿದ್ದಾನೆ. ಇದರಿಂದ ಕಿರಿ ಕಿರಿ ಅನುಭವಿಸಿದ್ದ ಮಹಿಳೆ ಆಕ್ರೋಶಗೊಂಡು ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಸದ್ಯ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next