Advertisement

ಮಹಿಳೆಯಿಂದ  ಮಲ ತುಂಬಿದ ಗುಂಡಿ ಸ್ಪಚ್ಛತೆ

07:17 PM May 28, 2021 | Team Udayavani |

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆಕಾರ್ಖಾನೆ (ಪಿಎಸ್‌ಎಸ್‌ಕೆ) ಆಡಳಿತ ಮಂಡಳಿ,ಓರ್ವ ದಲಿತ ಮಹಿಳೆಯಿಂದ ನೌಕರರ ವಸತಿಗೃಹಗಳ (ಕ್ವಾಟ್ರಸ್‌) ಬಳಿಯಿದ್ದ ಮಲ ತುಂಬಿದ ಗುಂಡಿಗೆ ಇಳಿಸಿ ಸ್ವತ್ಛತೆ ಕೆಲಸ ಮಾಡಿಸಿದ ಅಮಾನವೀಯ ಘಟನೆ ನಡೆದಿದೆ.

Advertisement

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿತಾತ್ಕಾಲಿಕವಾಗಿ ಸ್ವತ್ಛತಾ ಕೆಲಸ ಮಾಡುತ್ತಿದ್ದ ಕೆನ್ನಾಳುಗ್ರಾಮದ ದಲಿತ ಮಹಿಳೆ ಎಂ.ಮಂಜುಳಾ ಅವರಿಂದಕಾರ್ಖಾನೆ ಆಡಳಿತ ಮಂಡಳಿ ತಮ್ಮ ವಿಶ್ವೇಶ್ವರನಗರಬಡಾವಣೆಯ ಪಿಎಸ್‌ಎಸ್‌ಕೆ ಕ್ವಾಟ್ರಸ್‌ನಲ್ಲಿರುವಮಲ ತುಂಬಿದ ಗುಂಡಿ ಗೆ ಇಳಿಸಿ ಸ್ವತ್ಛತೆಕೆಲಸ ಮಾಡಿಸಿರುವ ಘಟನೆ ಕಳೆದ ಹತ್ತು ದಿನಗಳಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸ್ವತ್ಛತೆಗೆ ಸೂಚಿಸಿದ ಕಾರ್ಖಾನೆ ಅಧಿಕಾರಿನಾಗೇಶ್: ಸಂಸ್ಥೆಯ ಅಧಿಕಾರಿ ಸೂಚನೆ ಮೇರೆಗೆದಬ್ಬೆ, ಕೈಗ್ಲೌಸ್‌, ಗೋರೋಮಣೆ ತೆಗೆದುಕೊಂಡು ಪಿಎಸ್‌ಎಸ್‌ಕೆ ಕ್ವಾಟ್ರಸ್‌ಗೆ ಸ್ವತ್ಛತಾ ಕಾರ್ಮಿಕರು ತೆರಳಿದ್ದಾರೆ. ಸ್ಥಳಕ್ಕೆ ಸಿವಿಲ್‌ ಇಂಜಿನಿಯರ್‌ ನಾಗೇಶ್‌ತೆರಳಿ ಕ್ವಾಟ್ರಸ್‌ ಬಳಿ ಮಿನಿ ಕ್ರೀಡಾಂಗಣದ ಮಧ್ಯದಲ್ಲಿದ್ದ ಮಲ ತುಂಬಿದ್ದ ಗುಂಡಿಯನ್ನು ತೋರಿಸಿ ತಕ್ಷಣ ಸಂಪೂರ್ಣ ಸ್ವತ್ಛತೆ ಮಾಡಿ ಎಂದುಸೂಚಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ಬಹಿರಂಗವಾದರೆ ಸಮಸ್ಯೆಉಂಟಾಗುತ್ತದೆ ಎಂದು ಆಕೆಗೆ ಬೆದರಿಸಿದ್ದಾರೆಎನ್ನಲಾಗಿದೆ. ಬೆದರಿಕೆಗೆ ಒಳಗಾಗಿದ್ದ ಮಂಜುಳಾ ಸಾಕ್ಷಿ ಸಹಿತ ತಮ್ಮ ಜನಾಂಗದ ಸಂಘಕ್ಕೆ ತಿಳಿಸಿದಾಗ, ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿ ಪಾಂಡವಪುರ ಉಪವಿಭಾಗ ಮಟ್ಟದ ಸದಸ್ಯ ಎಸ್‌.ಕುಮಾರ್‌(ಪಾರ್ಥಸಾರಥಿ) ಕರ್ಮಚಾರಿ ಆಯೋಗಕ್ಕೆಅಧಿಕೃತವಾಗಿ ಸಾಕ್ಷಿ ಸಹಿತ ದೂರು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next