ದೊಡ್ಡಬಳ್ಳಾಪುರ: ತಾಲೂಕಿನ ಗಾಳಿಪೂಜೆ ಗ್ರಾಮದ ಬಳಿ ಇರುವ ನೀಲಗಿರಿ ತೋಪೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ತೀವ್ರವಾಗಿ ಪಸ ರಿಸಿದ ಬೆಂಕಿಯ ಜ್ವಾಲೆಗೆ ಸುಮಾರು 10 ಎಕರೆ ಯಷ್ಟು ನೀಲಗಿರಿ ತೋಪಿಗೆ ಹಾನಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ 12ರ ವೇಳೆಯಲ್ಲಿ ನಡೆದಿದೆ.
ತೋಪಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ತೀವ್ರ ಗತಿಯಲ್ಲಿ ಬೆಂಕಿ ಹರಡಿದ ಕಾರಣ ಈ ವ್ಯಾಪ್ತಿ ಯಲ್ಲಿ ದಟ್ಟ ಹೊಗೆ ಉಂಟಾಗಿತ್ತು. ಹೊಗೆಯ ತೀವ್ರತೆಗೆ ತಳಗವಾರ ಮತ್ತು ನೆರಳಘಟ್ಟ ನಡುವಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಪರದಾಡುವಂತಾಗಿ ಕೆಲ ಕಾಲ ವಾಹನ ಸ್ಥಗಿತಗೊಂಡಿತ್ತು.
ಯುವಕರ ಶ್ರಮದಾನ: ತೀವ್ರವಾಗಿ ಹರಡು= ತ್ತಿದ್ದ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ವಾಹನ ಬಂದಿತು. ವಾಹನ ತೋಪಿನ ಒಳಗೆ ತೆರಳು ಅಸಾಧ್ಯವೆಂದು ಮುಂಜಾಗ್ರತೆ ವಹಿಸಿದ ಈ ದಾರಿಯಲ್ಲಿ ಸಾಗುತ್ತಿದ್ದ ನೆರಘಟ್ಟ ಹಾಗೂ ತಳಗವಾರ ಗ್ರಾಮದ ನವೀನ್, ಬಾಷಾ, ಗೋವಿಂದರಾಜು, ಸುನೀಲ್ ಹಲವು ಗಂಟೆ ಗಳ ಕಾಲ ಶ್ರಮಿಸಿ ಬೆಂಕಿ ಹರಡುವುದನ್ನು ಹತೋಟಿಗೆ ತಂದರು.
ಇದನ್ನೂ ಓದಿ:ಅನುದಾನ ಬೇಡ, ಬದುಕಲು ಅವಕಾಶ ಕೊಡಿ
ಬೆಂಕಿಯ ಜ್ವಾಲೆಗೆ ನೀಲ ತೋಪು ಹಾಗೂ ವನ್ಯ ಪಕ್ಷಿಗಳು ಆಹುತಿ ಯಾಗಿದ್ದು, ಬೆಂಕಿ ಹತ್ತಿಕೊಳ್ಳಲು ಕಿಡಿಗೇಡಿಗಳ ಕೃತ್ಯವೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ