ಬಂಟ್ವಾಳ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಹಲವರು ಗಾಯಗೊಂಡ ಘಟನೆ ಬಂಟ್ವಾಳದ SVS ಕಾಲೇಜಿನ ಬಳಿ ನಡೆದಿದೆ.
ಪುಂಜಾಲ ಕಟ್ಟೆ, ಮೂರ್ಜೆ, ವಾಮದಪದವು , ಮಾರ್ಗವಾಗಿ ಬಿ. ಸಿ ರೋಡಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ಈ ಬಸ್ ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಪ್ರಯಣಿಸುತ್ತಿದ್ದು, ಹಲವು ವಿದ್ಯಾರ್ಥಿಗಳು ಪರೀಕ್ಷೆಗೆಂದು ತೆರಳುತ್ತಿದ್ದರು.
ಘಟನೆಯಲ್ಲಿ ಪ್ರಯಾಣಿಕರಾದ ಶ್ಯಾಮಲಾ, ಸ್ವಾತಿ, ಅಭಿನವ್, ಗೋಪಾಲ ಸಪಲ್ಯ ವಾಮದಪದವು, ಹೇಮಾವತಿ ವಾಮದಪದವು, ಚಂದ್ರಾವತಿ ಅಣ್ಣಳಿಕೆ, ವಿದ್ಯಾರ್ಥಿನಿಯರಾದ ಕೊಯ್ಲದ ವಹೀದಾ, ಮಾವಿನಕಟ್ಟೆಯ ವಿಖ್ಯಾತಿ, ವಾಮದಪದವಿನ ವೈಷ್ಣವಿ ಹಾಗೂ ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಬಲಿ: ಹೆಚ್ ಡಿಕೆ ಆಕ್ರೋಶ
ಇದೇ ಸಮಯದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡ ಪ್ರಯಾಣಿಕರ ಆರೋಗ್ಯ ವಿಚಾರಿಸಿದರು. ಮಾತ್ರವಲ್ಲದೆ, ಅಪಘಾತದ ಹಿನ್ನೆಲೆಯನ್ನು ತಿಳಿದುಕೊಂಡು ಘಟನೆಯ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಶಾಸಕ ರಾಜೇಶ್ ನಾಯ್ಕ್ ಕೂಡಾ ಉಪಸ್ಥಿತರಿದ್ದರು.