Advertisement

ಶವದ ಮುಂದಿನ ಬಿಡಿಗಾಸಲ್ಲೂ ಪಾಲು

12:15 PM Apr 17, 2021 | Team Udayavani |

ಬೆಂಗಳೂರು: “ಸರ್‌.. ನಮ್ಮ ತಂದೆ ಬಳಿಕ ನಾನು ಇದೇ ವೃತ್ತಿಯನ್ನು ಮುಂದುವರಿಸಿದ್ದೇನೆ.ಸಮಾಜದಲ್ಲಿ ನಮಗೆ ಯಾರೂ ಗೌರವ ಕೊಡುತ್ತಿಲ್ಲ.ಮನೆಯಲ್ಲಿ 28 ವರ್ಷ ತುಂಬಿದ ಹೆಣ್ಣು ಮಗಳಿದ್ದಾಳೆ.ಈವರೆಗೆ ಯಾರು ಹೆಣ್ಣು ಕೇಳಿಕೊಂಡು ಮನೆಗೆಬಂದಿಲ್ಲ. ನಮಗೆ ಆರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ಹಿಂದೆ ಮುಂದೆನೋಡುತ್ತಾರೆ. ಶವದ ಮುಂದಿನ ತಟ್ಟೆಯ ಬಿಡಿಗಾಸಿನಲ್ಲೂ ಅಧಿಕಾರಿಗಳು ನಮಗೂ ಪಾಲುಬೇಕು ಎನ್ನುತ್ತಾರೆ. ಸಮಾಜ ನಮ್ಮನ್ನು ಸಾವಿನದವಡೆಗೆ ನೂಕಿದೆ.

Advertisement

ಹೀಗೆ.. ನಗರದ ವಿವಿಧೆಡೆ ರುದ್ರಭೂಮಿ ಮತ್ತುಚಿತಾಗಾರದಲ್ಲಿ ಕೆಲಸ ಮಾಡುತ್ತಿರುವ ನೌಕರರುಹಾಗೂ ಕುಟುಂಬಸ್ಥರು, ಕಲ್ಪಹಳ್ಳಿ ಕಾಕ್ಸಟೌನ್‌-ಜೀವನಹಳ್ಳಿ ಹಿಂದೂ ರುದ್ರಭೂಮಿಗೆ ಶುಕ್ರವಾರಭೇಟಿ ನೀಡಿದ್ದ ರಾಜ್ಯ ಅನುಸೂಚಿತ ಜಾತಿಗಳು ಮತ್ತುಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯಎಚ್‌.ವೆಂಕಟೇಶ್‌ ದೊಡ್ಡೇರಿ ಮುಂದೆ ತಮ್ಮ ಅಳಲನ್ನುತೋಡಿಕೊಂಡರು.

ಖಾಯಂ ನೌಕರರನ್ನಾಗಿ ಘೋಷಿಸಿ: ನಾಗಶೆಟ್ಟಿಹಳ್ಳಿರುದ್ರಭೂಮಿ ನೌಕರ ಮುನಿರಾಜು ಮಾತನಾಡಿ,ತಂದೆಯಂತೆ ನಾನೂ ರುದ್ರಭೂಮಿಯಲ್ಲಿ ಕೆಲಸಮಾಡುತ್ತಿದ್ದೇನೆ. ನಮಗೆ ಮನೆ-ಮಠ ಇಲ್ಲ.ಸರಿಯಾಗಿ ವೇತನ ಬರುತ್ತಿಲ್ಲ. ಶವ ಸಂಸ್ಕಾರಕ್ಕೆಬರುವವರು ಕೊಡುವ ಹಣ ಪಡೆಯುತ್ತೇವೆ.ಅದರಿಂದ ನಮ್ಮ ಹೊಟ್ಟೆ ತುಂಬುತ್ತಿಲ್ಲ. ನಮ್ಮನ್ನು ಖಾಯಂ ನೌಕರರನ್ನಾಗಿ ಪರಿಗಣಿಸಬೇಕು ಎಂದರು.

ಪಟ್ಟಿಯಲ್ಲಿಲ್ಲದವರಿಗೆ ವೇತನ: ಗೆದ್ದಲಹಳ್ಳಿರುದ್ರಭೂಮಿ ನೌಕರರಾದ ಗಂಗಾಧರ್‌ ಮತ್ತುಷಣ್ಮುಖ ಮಾತನಾಡಿ, ಈಗಾಗಲೇ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ವೇತನ ಪಟ್ಟಿಯಲ್ಲಿಹೆಸರು ಸೇರಿಸಿಲ್ಲ. ಕೆಲಸ ಮಾಡುವವರನ್ನುಪಟ್ಟಿಯಿಂದ ಬಿಟ್ಟು, ಕೆಲಸ ಮಾಡದವರ ಹೆಸರನ್ನುಪಟ್ಟಿಗೆ ಸೇರಿಸಿ, ಸರ್ಕಾರದ ಹಣವನ್ನು ಅಧಿಕಾರಿಗಳುದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಇದೇ ವೇಳೆ ರುದ್ರಭೂಮಿಯಲ್ಲಿನ ನೀರಿನ ಸಮಸ್ಯೆ,ಕವಲುಗಾರರು ಹಾಗೂ ಗೇಟ್‌ ಸಮಸ್ಯೆ ಇದ್ದು,ನೌಕರರ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಎಂದುಅಧಿಕಾರಿಗಳ ಗಮನಕ್ಕೆ ತಂದರು.

ರುದ್ರಭೂಮಿಯಲ್ಲಿ ಗಾಂಜಾ ಸೇವನೆ: ಗೆದ್ದಲಹಳ್ಳಿರುದ್ರಭೂಮಿ ನೌಕರ ರವಿಶಂಕರ್‌ ಮಾತನಾಡಿ,ಏಳೆಂಟು ತಿಂಗಳಿಂದ ವೇತನ ಆಗಿಲ್ಲ. ಹೋರಾಟಮಾಡಿದ ಬಳಿಕ ಏ. 15ರಂದು ಅಲ್ಪ ವೇತನಬಿಡುಗಡೆಯಾಗಿದೆ. ರುದ್ರಭೂಮಿ ಸ್ಥಳದಲ್ಲಿ ಕೆಲಯುವಕರು ಬಂದು ಗಾಂಜಾ ಸೇವನೆ ಮಾಡುತ್ತಾರೆ.ಈ ಬಗ್ಗೆ ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

Advertisement

ಸಮಸ್ಯೆಗೆ ಸ್ಪಂದಿಸದಿದ್ದರೆ ಕಾನೂನು ಕ್ರಮ:ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳುನಿರ್ಲಕ್ಷ್ಯ ವಹಿಸುತ್ತಿ¨ªಾರೆ. ನೌಕರರು ಅಧಿಕಾರಿಗಳಕಚೇರಿಗೆ ಹೋದಾಗ ಹೆಣ ಸುಡಯವವರುಬಂದಿದ್ದಾರೆ ಎಂದು ಎರಡೂ ಮೂರು ಗಂಟೆ ಕಾಯಿಸುತ್ತಾರೆ. ಅಷ್ಟರಮಟ್ಟಿಗೆ ಅಧಿಕಾರಿಗಳುದೌರ್ಜನ್ಯ ಮಾಡುತ್ತಾರೆ. ಇದನ್ನು ಸರಿಪಡಿಸಲುಆಯೋಗ ಬದ್ಧವಾಗಿದೆ. ನಿಮ್ಮ ಹಕ್ಕು ನೀವು ಕೇಳುತ್ತಿದ್ದಿರಾ. ಸಮಸ್ಯೆಗೆ ಸ್ಪಂದಿಸದ ಅಧಿಕಾರಿ ವಿರುದ್ಧಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಾತಿಮತ್ತು ಬುಡಕಟ್ಟುಗಳ ಆಯೋಗದ ಸದಸ್ಯಎಚ್‌.ವೆಂಕಟೇಶ್‌ ದೊಡ್ಡೇರಿ ಎಚ್ಚರಿಸಿದರು.ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿ ರಾಜ್ಯಗೌರವಾಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಪ್ರದಾನಕಾರ್ಯದರ್ಶಿ ಸುರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next