ಬೆಂಗಳೂರು: ರಾಬರ್ಟ್ ಸಿನಿಮಾ ನಿರ್ಮಾಪಕಉಮಾಪತಿ ಹಾಗೂ ರೌಡಿಶೀಟರ್ ಸೈಕಲ್ ರವಿಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ಸಹಚರ ರಾಜೇಶ್ ಅಲಿಯಾಸ್ ಕರಿಯ ಏಳು ತಿಂಗಳ ಬಳಿಕ ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.ನೇಪಾಳದ ಪೋಖಾನ್ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಕರಿಯನನ್ನು ಸೆರೆ ಹಿಡಿಯುವಲ್ಲಿ ದಕ್ಷಿಣವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
2020ರ ಡಿ.20ರಂದು ನಿರ್ಮಾಪಕ ಉಮಾಪತಿ,ಸಹೋದರ ದೀಪಕ್, ರೌಡಿಶೀಟರ್ ಸೈಕಲ್ ರವಿಮತ್ತು ಬೇಕರಿ ರಘು ಕೊಲೆಗೆ ಎದುರಾಳಿ ಬಾಂಬೆರವಿ ಸಂಚು ರೂಪಿಸಿದ್ದ. ಅದರಂದೆ ಸುಮಾರು12ಕ್ಕೂ ಅಧಿಕ ಮಂದಿ ಜಯನಗರದ ನ್ಯಾಷನಲ್‌ಕಾಲೇಜು ಆಟದ ಮೈದಾನ ಗೈಟ್ ಮುಂಭಾಗಟೆಂಪೋ ಟ್ರಾವೆಲ್ಲರ್ ನಲ್ಲಿ ಉಮಾಪತಿ, ಸೈಕಲ್‌ರವಿ ಹತ್ಯೆಗೆ ಸಂಚು ರೂಪಿಸಿದ್ದರು.ಅದೇ ವೇಳೆ ಗಸ್ತಿನಲ್ಲಿದ್ದ ಜಯನಗರ ಠಾಣೆಯಇನ್‌ಸ್ಪೆಕ್ಟರ್ ಎಚ್.ವಿ.ಸುದರ್ಶನ್ ಹಾಗೂ ಸಿಬ್ಬಂದಿಆರೋಪಿಗಳ ವಿಚಾರಿಸಲು ಹೋದಾಗ ಅವರಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಬಳಿಕ ಕಾರ್ಯಾಚರಣೆ ನಡೆಸಿ 9 ಮಂದಿಯನ್ನುಬಂಧಿಸಲಾಗಿತ್ತು. ಬಂಧಿತರ ವಿಚಾರಣೆಯಲ್ಲಿಪ್ರಕರಣದಲ್ಲಿ ಬಾಂಬೆ ರವಿ ಮತ್ತು ಆತನ ಆಪ್ತಸಹಚರ ರಾಜೇಶ್ ಅಲಿಯಾಸ್ ಕರಿಯ ಹೆಸರು ಕೇಳಿ ಬಂದಿತ್ತು.ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಸುವವೇಳೆ ಆರೋಪಿ ದೇಶ ಬಿಟ್ಟು ತೆರಳಿದ್ದಾನೆ ಎಂಬಮಾಹಿತಿ ಸಿಕ್ಕಿತ್ತು.
ಇದೇ ವೇಳೆ ರಾಜೇಶ್ ತನ್ನದೈನಂದಿನ ಖರ್ಚಿಗಾಗಿ ಅಜ್ಞಾತ ಸ್ಥಳದಿಂದಲೇ ಬೆಂಗಳೂರಿನ ಕೆಲವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ಕೊಡದಿದ್ದರೆ ಕೊಲೆಗೈಯುವುದಾಗಿಬೆದರೆಕೆ ಹಾಕುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇಬ್ಬರ ಆಡಿಯೋ, ವಿಡಿಯೋ ಲಭ್ಯ: ಪ್ರಕರಣಸಂಬಂಧ ಮಾಸ್ಟರ್ ಮೈಂಡ್ ಬಾಂಬೆ ರವಿ ಮತ್ತುರಾಜೇಶ್ ಪರಸ್ಪರ ಫೋನ್ ಮೂಲಕ ಸಂಪರ್ಕಿಸುತ್ತಿರುವುದು ಖಾತ್ರಿಯಾಗಿತ್ತು. ಅವರ ಆಡಿಯೋವಿಡಿಯೋ ಸಂಭಾಷಣೆ ತನಿಖೆ ವೇಳೆ ಸಿಕ್ಕಿತ್ತು. ಈಹಿನ್ನೆಲೆಯಲ್ಲಿ ಕೆಂಪೇಗೌಡ ನಗರ ಠಾಣೆಯ ಇನ್‌ಸ್ಪೆಕ್ಟರ್ ಚೇತನ್ ಕುಮಾರ್ ನೇತೃತ್ವದ ತಂಡಕಾರ್ಯಾಚರಣೆ ಆರಂಭಿಸಿತ್ತು.