ನವದೆಹಲಿ: 45 ವರ್ಷದ ವ್ಯಕ್ತಿಯೊಬ್ಬರ ಮೇಲೆ ಅಪರಿಚಿತನೋರ್ವ ಗುಂಡು ಹಾರಿಸಿದ ಪರಿಣಾಮ ವ್ಯಕ್ತಿ ಸಾವನಪ್ಪಿರುವ ಘಟನೆ ದೆಹಲಿಯ ಆದರ್ಶ್ ನಗರದಲ್ಲಿ ನಡೆದಿದೆ. ಗುಂಡಿನ ದಾಳಿಗೆ ಒಳಗಾದ ವ್ಯಕ್ತಿ ಯನ್ನು ಅನಿಲ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು, ಬೆಳಿಗ್ಗೆ ಪೊಲೀಸ್ PCR ಗೆ ಕರೆಯೊಂದು ಬಂದಿದ್ದು, ಈ ಕರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಆದರ್ಶ್ ನಗರದ ವ್ಯಕ್ತಿ ಗಾಯಗೊಂಡಿದ್ದಾನೆ ಎನ್ನಲಾಗಿತ್ತು. ಈ ನಡುವೆ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೊಳಚೆ ಗುಂಡಿಗೆ ಬಿದ್ದು ಒಂದೇ ಕುಟುಂಬದ 4 ಜನ ಸೇರಿ 5 ಮಂದಿ ಸಾವು!
ಘಟನೆಯ ಕುರಿತಾಗಿ ಆದರ್ಶ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡು ಹಾರಿಸಿದವನ ವಿರುದ್ಧ ಹಲವಾರು ಕಾಯ್ದೆಯ ಅಡಿಯಲ್ಲಿ ಈಗಾಗಲೇ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸುವ ನಿಟ್ಟಿನಲ್ಲಿ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ CCTV ಫೊಟೇಜ್ ಅನ್ನು ಒಳಗೊಂಡಂತೆ ಎಲ್ಲಾ ವಿಧವಾದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕೋವಿಡ್ 2ನೇ ಅಲೆ ಎಚ್ಚರ ತಪ್ಪಬೇಡಿ, ನಿಯಮ ಪಾಲಿಸಿ: ಸಿಎಂ ಸಭೆಯಲ್ಲಿ ಪ್ರಧಾನಿ ಮೋದಿ