ಬೆಂಗಳೂರು: ದ್ವಿಚಕ್ರ ವಾಹನದ ಸೈಡ್ ಸ್ಟಾಂಡ್ ಸಿಮೆಂಟ್ ಬ್ಲಾಕ್‌ಗೆ ತಗುಲಿದ ಪರಿಣಾಮ, ಬೈಕ್ ಆಯ ತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿ ಗಳು ಮೇಲು ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಅಮೋಲ್ ಪ್ರಮೋದ್ ಆಮ್ಟೆ(29) ಮತ್ತು ದೆಹಲಿಯ ಅಮಿತ್ ಸಿಂಗ್ (29) ಮೃತ ವಿದ್ಯಾರ್ಥಿಗಳು. ಮತ್ತೂಬ್ಬ ವಿದ್ಯಾರ್ಥಿ ಸೌರವ್ ದೇಗೆ ತಲೆಗೆ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಿಪ್ಟಿ ಕಾಲೇಜಿನಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿ ರುವ ಮೂವರು ನಂದಿಬೆಟ್ಟಕ್ಕೆ ಹೋಗುವು ದಾಗಿ ಸ್ನೇಹಿತರ ಬಳಿ ಹೇಳಿದ್ದರು. ಅಮಿತ್ ಸಿಂಗ್ ತನ್ನ ಸಹೋದರನ ಹೆಸರಿನಲ್ಲಿರುವ ಬೈಕ್‌ನಲ್ಲಿ ತನ್ನ ಇಬ್ಬರು ಸ್ನೇಹಿತರನ್ನು ಕೂರಿಸಿಕೊಂಡು ತ್ರಿಬಲ್ ರೈಡಿಂಗ್ ಮಾಡಿಕೊಂಡು ನಂದಿಬೆಟ್ಟಕ್ಕೆ ಹೋಗಿದ್ದರು. ವಾಪಸ್ ಬೆಂಗಳೂರಿಗೆ ಬರುವಾಗ ಅತೀ ವೇಗವಾಗಿ ಬೈಕ್ ಚಾಲನೆ ಮಾಡಿದ ಸೌರವ್ ತನ್ನ ಬೈಕ್‌ನ ಸೈಡ್ ಸ್ಟಾಂಡ್ ತೆಗೆಯುವುದನ್ನು ಮರೆತಿದ್ದು, ಏರ್‌ಪೋರ್ಟ್ ಮಾರ್ಗದ ಬಿಬಿ ರಸ್ತೆಯ ರೈತರ ಸಂತೆಯಿಂದ ಸ್ವಲ್ಪ ಮುಂದೆ ಮೇಲು ಸೇತುವೆ ಮೇಲೆ ಹೋಗುತ್ತಿದ್ದರು. ಈ ವೇಳೆ ಮೇಲು ಸೇತುವೆಯ ರಸ್ತೆ ಬದಿಯಿದ್ದ ಸಿಮೆಂಟ್ ಬ್ಲಾಕ್‌ಗೆ ಸೈಡ್ ಸ್ಟಾಂಡ್ ತುಗಲಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆದು, ಹಿಂಬದಿ ಕುಳಿತಿದ್ದ ಅಮಿತ್ ಸಿಂಗ್ ಮತ್ತು ಅಮೋಲ್ ಪ್ರಮೋದ್ ಆಮ್ಟೆ ಇಬ್ಬರು ಮೇಲು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ಇಬ್ಬರ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಇನ್ನು ಹೆಲ್ಮೆಟ್ ಧರಿಸಿದ್ದ ಸೌರವ್ ದೇಗೆ ಎಡಗೈ ಮತ್ತು ತಲೆಗೆ ಪೆಟ್ಟು ಬಿದ್ದಿತ್ತು.
ಕೂಡಲೇ ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅಮೋಲ್ ಪ್ರಮೋದ್ ಆಮ್ಟೆ ಮೃತಪಟ್ಟಿದ್ದಾನೆ. ಅಮಿತ್ ಸಿಂಗ್ ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇನ್ನು ತಲೆಗೆ ಪೆಟ್ಟುಬಿದ್ದಿರುವ ಸೌರವ್ ದೇ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಪೆಟ್ಟು ಬಿದ್ದಿ ದೆ ಎಂದು ಸಂಚಾರ ಪೊಲೀಸರು ಹೇಳಿದರು.
ಯಲಹಂಕ ಸಂಚಾರ ಠಾಣೆಯಲ್ಲಿ ಬೈಕ್ ಚಾಲಕ ಸೌರವ್ ದೇ ವಿರುದ್ಧ ಪ್ರಕರಣ ದಾಖಲಾಗಿದೆ.