Advertisement

ಸುರತ್ಕಲ್: ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಸೆಲ್ಫಿ ತೆಗೆಯಲು ಹೋದ ಯುವಕನಿಗೆ ವಿದ್ಯುತ್ ಶಾಕ್

07:46 PM Nov 23, 2021 | Team Udayavani |

ಸುರತ್ಕಲ್: ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಭಾಗಶಃ ಸುಟ್ಟು ಹೋಗಿರುವ ಘಟನೆ ಸುರತ್ಕಲ್  ರೈಲ್ವೆ  ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

ಸಲಾನ್ ಪಾರಸ್ (21) ಅವಘಡಕ್ಕೆ ಒಳಗಾದ ಯುವಕ. ಸುರತ್ಕಲ್ ಕೊಂಕಣ ರೈಲ್ವೇ ನಿಲ್ದಾಣ ವಿದ್ಯುತ್ತೀಕರಣಗೊಂಡಿದೆ. ತಳಮಟ್ಟದಲ್ಲಿ ಹೈವೋಲ್ಟೇಜ್ ತಂತಿಗಳನ್ನು ಆಳವಡಿಸಲಾಗಿದೆ. ಅಪಾಯದ ಬೋರ್ಡನ್ನು ಕೂಡ ಹಾಕಲಾಗಿತ್ತು. ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ತೆರಳಿದ್ದ ಸಲಾನ್ ಹೈವೋಲ್ಟೇಜ್ ತಂತಿಗಳನ್ನು ಗಮನಿಸದೇ ಇದ್ದುದ್ದರಿಂದ ವಿದ್ಯುತ್ ಶಾಕ್ ಹೊಡೆದು ಭಾಗಶಃ ಸುಟ್ಟು ಹೋಗಿದ್ದಾನೆ.

ಸದ್ಯ ಯುವಕನಿಗೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next