ಪಿರಿಯಾಪಟ್ಟಣ: ಅಗ್ನಿಪಥ್ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂದುರುಗುತ್ತಿದ್ದ ಯುವಕನೋರ್ವ ಬೈಕ್ ಅಪಘಾತದಲ್ಲಿ ಸಾವಿಗೀಡಾದ ಘಟನೆ ಮಂಗಳವಾರ ಸಂಜೆ (ಆ.16 ರಂದು) ನಡೆದಿದೆ.
ಮಲ್ಲಿನಾಥಪುರ ಗ್ರಾಮದ ದಿ. ಹರೀಶ್ ಮತ್ತು ಸುಧಾ ದಂಪತಿಗಳ ಪುತ್ರ ವಿನಯ್‌ಗೌಡ (20) ಮೃತ ಯುವಕ.
ಇದನ್ನೂ ಓದಿ: ತಾಪ್ಸಿಗಿಂತ ದೊಡ್ಡ …. ನನಗಿದೆ: ಅನುರಾಗ್ ಕಶ್ಯಪ್ ಸಂದರ್ಶನದ ಮಾತು ವೈರಲ್!
ನೆರೆಯ ಹಾಸನದಲ್ಲಿ ನಡೆದ ಅಗ್ನಿಪಥ್ ಸೇನಾ ರ‍್ಯಾಲಿಗೆ ಯುವಕರೊಂದಿಗೆ ಹೋಗಿ ಬೈಕ್‌ನಲ್ಲಿ ಹಿಂಬದಿ ಸವಾರನಾಗಿ ಕೂತು ವಾಪಸ್ಸಾಗುತ್ತಿದ್ದ ವೇಳೆ ರಾಗಿಮರೂರು ಬಳಿ ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿನಯ್‌ಗೌಡ ಸಾವನಪ್ಪಿದ್ಧಾನೆ. ಬೈಕ್ ಓಡಿಸುತ್ತಿದ್ದ ಸವಾರನ ಕಾಲು ಮುರಿದಿದೆ ಎನ್ನಲಾಗಿದೆ.
ಈ ಬಗ್ಗೆ ಕೊಣನೂರು ಪೊಲೀಸ್‌ಠಾಣೆಯಲ್ಲಿ ದೂರುದಾಖಲಾಗಿದ್ದು ತನಿಖೆ ಕೈಗೊಂಡಿದ್ಧಾರೆ.