Advertisement

ಹಾಡಹಗಲೇ ನಗರದಲ್ಲಿ ಲಾಂಗ್‌, ಮಚ್ಚುಗಳ ಸದ್ದು

12:04 PM Feb 27, 2023 | Team Udayavani |

ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಲಾಂಗ್‌ ಮಚ್ಚುಗಳನ್ನು ಹಿಡಿದುಕೊಂಡು ಯುವಕರು ಅಟ್ಟಹಾಸವನ್ನು ಮೆರೆದಿರುವ ಘಟನೆ ತಾಲೂಕಿನಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ಸಂಭವಿಸಿದೆ.

Advertisement

ಅತುಬ್‌(22)ಮತ್ತಿತರ ಮೂರು ಮಂದಿ ಸೇರಿಕೊಂಡು ತಮ್ಮ ಸಂಬಂಧಿ ಯುವಕನೊಬ್ಬನ ಮೇಲೆ ಹತ್ತು ಸಾವಿರ ರೂಪಾಯಿಗಳ ಹಣಕಾಸುವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ನಡೆದ ಹಿನ್ನೆಲೆ ಉದ್ರೇಕಗೊಂಡ ಅತುಬ್‌ ಮತ್ತುಸ್ನೇಹಿತರು ಹಾಡಹಗಲಲ್ಲೇ ಮಚ್ಚು, ಲಾಂಗ್‌ ಹಿಡಿದು ಅಟ್ಟಹಾಸವನ್ನು ಮೆರೆಯುವ ಮೂಲಕ ಪೊಲೀಸ್‌ವ್ಯವಸ್ಥೆಗೆ ಸೆಡ್ಡು ಹೊಡೆಯುವ ಮೂಲಕಸಾರ್ವಜನಿಕರಲ್ಲಿ ಭಯವನ್ನು ಹುಟ್ಟಿಸಿರುವುದು ಗುಟ್ಟಾಗಿ ಉಳಿದಿಲ್ಲ.

ಯುವಕರಿಗೆ ಭಯವಿಲ್ಲ: ತಾಲೂಕಿನ ಇಸ್ಲಾಂಪುರ ಗ್ರಾಮ ಮುಸ್ಲಿಂ ಸಮುದಾಯದವರೆ ಹೆಚ್ಚಾಗಿರುವ ಗ್ರಾಮವಾಗಿದ್ದು, ಹಿಂದೂಗಳು ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಮುಸ್ಲಿಂ ಯುವಕರಿಗೆ ಹೆಗ್ಗಿಲ್ಲದಂತಾಗಿದ್ದು, ತಾವು ಆಡಿದ್ದೇ ಆಟ, ಊಡಿದ್ದೆ ಲಜ್ಜೆ ಎಂಬಂತಾಗಿದೆ. ಪೊಲೀಸರ ಭಯವಾಗಲಿ, ಅಥವಾ ಕಾನೂನಿನ ಭಯವಾಗಲಿ ಇಲ್ಲದಕ್ಕೆ ಈ ರೀತಿಯಲ್ಲಿ ಕ್ರೌರ್ಯವನ್ನು ಮೆರೆಯುತ್ತಿದ್ದಾರೆಂಬ ಮಾತುಗಳು ಪಟ್ಟಣದ ಜನನೀಬಿಡ ಪ್ರದೇಶಗಳಲ್ಲಿ ಚರ್ಚೆಯ ವಿಚಾರವಾಗಿತ್ತು. ಇನ್ನಾದರೂ ಪೊಲೀಸ್‌ ಅಧಿಕಾರಿಗಳು ಯುವಕರ ಉಪಟಳಕ್ಕೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ. ಪ್ರಕರಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next