Advertisement

ಮಡಿಕೇರಿ: ಬಾಲಕಾರ್ಮಿಕಳಾಗಿ ದುಡಿಯುತ್ತಿದ್ದ ಬಾಲಕಿಯ ರಕ್ಷಣೆ

01:06 AM Jun 24, 2022 | Team Udayavani |

ಮಡಿಕೇರಿ: ಕುಶಾಲನಗರ ತಾಲೂಕಿನ ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ಬಾಲಕಾರ್ಮಿಕಳಾಗಿ ದುಡಿಯುತ್ತಿದ್ದ ಬಾಲಕಿಯೊಬ್ಬಳನ್ನು ವಿಶೇಷ ಮಕ್ಕಳ ಪೊಲೀಸ್‌ ಘಟಕ ಹಾಗೂ ವಿವಿಧ ಇಲಾಖೆಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿವೆ.

Advertisement

ಗ್ರಾಮದಲ್ಲಿ ತಪಾಸಣೆ :

ಚೈಲ್ಡ್‌ ಲೈನ್‌ 1098 (ಮಕ್ಕಳ ಸಹಾಯವಾಣಿ) ಇದಕ್ಕೆ ಬಂದ ದೂರನ್ನು ಆಧರಿಸಿ ಕೊಡಗು ಜಿಲ್ಲಾ ವಿಶೇಷ ಮಕ್ಕಳ ಪೊಲೀಸ್‌ ಘಟಕ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ತಪಾಸಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಕಾರ್ಯಾಚರಣೆಗೆ ಪೊಲೀಸ್‌ ವರಿಷ್ಠಾಧಿಕಾರಿ ಶ್ಲಾಘನೆ :

ಕಾರ್ಯಾಚರಣೆಯಲ್ಲಿ ಹಿರಿಯ ಕಾರ್ಮಿಕ ನಿರಿಕ್ಷಕರಾದ ಲೀನಾ, ವಿಶೇಷ ಮಕ್ಕಳ ಪೋಲಿಸ್‌ ಘಟಕದ ಸುಮತಿ, ಜಿಲ್ಲಾ ಬಾಲ ಕಾರ್ಮಿಕ ಯೋಜನ ಸೊಸೈಟಿಯ ಯೋಜನ ನಿರ್ದೇಶಕ ಆರ್‌. ಶಿರಾಜ್‌ ಅಹ್ಮದ್‌,  ಮಕ್ಕಳ ರಕ್ಷಣ ಘಟಕದ ಕ್ಷೇತ್ರ ಕಾರ್ಯಕರ್ತರಾದ ಅಬ್ದುಲ್‌ ನಿಸಾರ್‌,  ಚೈಲ್ಡ್‌ ಲೈನ್‌ ತಂಡದ ಸದಸ್ಯರಾದ ಶೋಭಲಕ್ಷ್ಮೀ ಹಾಗೂ ಪ್ರವೀಣ್‌ ಕುಮಾರ್‌ ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ತಂಡದ ಕಾರ್ಯವನ್ನು ಶ್ಲಾ ಸಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದರೆ ಚೈಲ್ಡ್‌ ಲೈನ್‌ 1098 (ಮಕ್ಕಳ ಸಹಾಯವಾಣಿ) ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next