Advertisement

ಆಹಾರ ಸಿಗದೇ ಚಿರತೆ ಸಾವು

03:11 PM May 01, 2022 | Team Udayavani |

ಕೆ.ಆರ್‌.ಪೇಟೆ: ಆಹಾರ ಸಿಗದೇ ಹಸಿವಿನಿಂದ ನರಳಿ ಚಿರತೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಚಿಕ್ಕಸೋಮನಹಳ್ಳಿ ಗ್ರಾಮದ ಸರ್ವೆ ನಂ. 39ರಲ್ಲಿ ಚಿರತೆ ಶವ ಬೇಲಿಯೊಳಗೆ ಪತ್ತೆಯಾಗಿತ್ತು. ಸಾರ್ವಜನಿಕರು ಈ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆ ಘಟನಾ ಸ್ಥಳಕ್ಕೆ ತಾಲೂಕಿನ ವಲಯ ಅರಣ್ಯಾಧಿಕಾರಿ ಗಂಗಾಧರ್‌, ನಾಗಮಂಗಲ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಉಪವಲಯಾರಣ್ಯಾಧಿಕಾರಿ ಭರತ್‌, ಅರಣ್ಯ ರಕ್ಷಕ ಶಿವಮೂರ್ತಿ, ಮಹೇಶ್‌, ಮಂಜು, ಪಶು ವೈದ್ಯಾಧಿಕಾರಿ ರವಿಕುಮಾರ್‌ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲದೇ, ಚಿರತೆ ಯಾವ ಕಾರಣಕ್ಕಾಗಿ ಸಾವನ್ನಪ್ಪಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಯಮಾನುಸಾರ ವಿಧಿ ವಿಧಾನ ನಡೆಸಿ ನಂತರ ಚಿರತೆಯ ಕಳೆಬರವನ್ನು ಸಾರ್ವಜನಿಕರ ಸಮಕ್ಷಮದಲ್ಲಿ ಸರ್ಕಾರಿ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಿದರು.

ಇತ್ತಿಚೆಗೆ ತಾಲ್ಲೂಕಿನಾದ್ಯಂತ ಕಬ್ಬು ಕಟಾವು ಮಾಡಲಾಗಿದ್ದು ಚಿರತೆಗಳು ವಾಸಿಸಲು ಕಷ್ಟವಾಗಿದೆ ಹಾಗೂ ಆಹಾರ ಹುಡುಕಾಟ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಇದರಿಂದಾಗಿ ಚಿರತೆಗಳು ಪದೇ ಪದೇ ಆಹಾರಕ್ಕಾಗಿ ಕಾಡಿನಂಚಿನ ಗ್ರಾಮಗಳಿಗೆ ಭೇಟಿ ನೀಡಿ ಹಸು, ಕರು, ನಾಯಿ, ಕುರಿ, ಮೇಕೆ ಮುಂತಾದವುಗಳನ್ನು ಬೇಟೆಯಾಡುವುದು ಸಹಜವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next