ಕೆ.ಆರ್.ಪೇಟೆ: ಹಾಡಹಗಲೇ ಕುಖ್ಯಾತ ರೌಡಿ ಶೀಟರ್ ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕೆ.ಆರ್.ಪೇಟೆ ಪಟ್ಟಣದ ಈಶ್ವರನ ದೇವಸ್ಥಾನದ ಆವರಣದಲ್ಲಿ ನಡೆದಿದೆ.
ಅರುಣ್ ಅಲಿಯಸ್ ಅಲ್ಲು (38) ಕೊಲೆಯಾದ ರೌಡಿ ಶೀಟರ್. ಈಶ್ವರನ ದೇವಸ್ಥಾನದ ಆವರಣದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಈ ಕೊಲೆಯನ್ನು ಮಾಡಲಾಗಿದೆ.
ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಪ್ರಕರಣದಲ್ಲಿ ಅರುಣ್ ಭಾಗಿಯಾಗಿದ್ದ. ಹಿಂದೆ ಜೈಲಿನಲ್ಲಿದ್ದಾಗಲೇ ಅಧಿಕಾರಿಯ ಸಹಾಯ ಪಡೆದು ಮಾರ್ವಾಡಿ ಕಿಡ್ನಾಪ್ ಮಾಡಿದ್ದ. ಎರಡನೇ ದರ್ಜೆ ರಾಜಕಾರಣಿಗಳಿಂದಲೂ ಹಫ್ತಾ ವಸೂಲಿಯನ್ನು ಮಾಡುತ್ತಿದ್ದ ಅರುಣ್ ನನ್ನು ಜೈಲಿನಿಂದ ಬಂದ ಬಳಿಕ ಪೊಲೀಸರು ಗಡೀಪಾರು ಮಾಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಬಲ ನಾಯಕರ ವಿರುದ್ದ ಬಿಜೆಪಿ ತನಿಖಾಸ್ತ್ರ ಪ್ರಯೋಗ ಮಾಡ್ತಿದೆ: ಡಿಕೆ ಶಿವಕುಮಾರ್
Related Articles
ಗಡಿಪಾರಾದರೂ ಕೆ.ಆರ್.ಪೇಟೆಗೆ ಬಂದಿದ್ದ ಹತ್ಯೆಗೆ ಹಳೆಯ ದ್ವೇಷದಿಂದ ಸ್ಕೆಚ್ ಹಾಕಿ ಕುಳಿತಿದ್ದ ಐವರು ಇಂದು ದೇವಸ್ಥಾನದ ಆವರಣದಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.