ಕನಕಪುರ: ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕಿದ ಆರೋಪಿಗಳನ್ನು ಹಾರೋಹಳ್ಳಿಪೊಲೀಸರು ಬಂಧಿಸಿದ್ದಾರೆ. ಅಭೇದ್ಯಎನ್ನುವಂತಿದ್ದ ಪ್ರಕರಣವನ್ನು ಕೇವಲ ಒಂದು ದಿನದಲ್ಲೇ ಭೇದಿಸಿದ ಕೀರ್ತಿಗೆಹಾರೋಹಳ್ಳಿ ಪೊಲೀಸರು ಪಾತ್ರರಾಗಿದ್ದಾರೆ.
ಗಾಧಾರನಹಳ್ಳಿಯ ಸಂತೋಷ ಗೌಡ ಜಿ.ಆರ್(30), ಅವರೇಮಾಳ ರಾಂಪುರಗ್ರಾಮದ ವಸಂತ (27)ಬಿನ್ ಲೇಟ್‌ಹೊಂಬಾಳೇಗೌಡ, ಗಾಧಾರನಹಳ್ಳಿಯಕೆ.ವಿನಯ್ ಕುಮಾರ್(27)ಬಿನ್ ಕುಮಾರ್ ಬಂಧಿತರು.
ಘಟನೆ ಏನು?: ಕನಕಪುರ ತಾಲೂಕು ಮರಳವಾಡಿ ಹೋಬಳಿ, ಗಾಧಾರನಹಳ್ಳಿಗ್ರಾಮದ ಫಾರಂ ಹೌಸ್‌ನಲ್ಲಿ ವಾಸವಾಗಿದ್ದ ಬ್ಯಾಂಕ್‌ವೊಂದರ ಅಧಿಕಾರಿ ಬಿಹಾರ ಮೂಲದ ರಾಧಾಕೃಷ್ಣಪ್ರಸಾದ್ ಅವರ ತಂದೆ ಪರಮೇಶ್ವರ ಮಹತ್ತೋ (75) ಕಳೆದ ಮಾ.30ರ ಮುಂಜಾನೆ 5-45 ಗಂಟೆ ಸಮಯದಲ್ಲಿ ಗಾಧಾರನ ಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಕಿಡ್ನಾಪ್ ಮಾಡಿದ್ದರು.
ಟವರ್ ಲೊಕೇಶನ್‌ನಿಂದ ಮಾಹಿತಿ: ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಮೂವರುಅಪರಿಚಿತರು ಪರಮೇಶ್ವರ ಮಹತ್ತೋಅವರ ಮುಖಕ್ಕೆ ಬಟ್ಟೆ ಹಾಕಿ, ಬಾಯಿಗೆಬಟ್ಟೆ ತುರುಕಿ, ಟಾಟಾ ಇಂಡಿಕಾ ಕಾರಿನಲ್ಲಿಹೊತ್ತೂಯ್ದಿದ್ದರು. ತದ ನಂತರ ಬೆಳಗ್ಗೆ ಸುಮಾರು 7.30ರ ಸಮಯಕ್ಕೆಪರಮೇಶ್ವರ ಮಹತ್ತೋ ಅವರ ಮಗ ರಾಧಾಕೃಷ್ಣ ಪ್ರಸಾದ್ ಅವರಿಗೆ ಫೋನ್ ಮಾಡಿ ತಂದೆಯವರನ್ನು ಬಿಡುಗಡೆ ಮಾಡಲು 25 ಲಕ್ಷರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದ ಪಕ್ಷದಲ್ಲಿ ಕೊಲೆ ಮಾಡುವುದಾಗಿ, ಅಪಹರಣದ ವಿಚಾರ ಪೊಲೀಸರಿಗೆ ಹೇಳಿದರೆ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ ಹಾರೋಹಳ್ಳಿ ಪೊಲೀಸರು, ತಕ್ಷಣಕಾರ್ಯಪ್ರವೃತ್ತರಾಗಿ ಟವರ್ ಲೊಕೇಶನ್ ಮಾಹಿತಿ ಅರಿತು ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ಲಾಘನೆ: ಅಪಹರಣಕಾರರನ್ನು ಬಂಧಿಸುವ ಕಾರ್ಯಾಚರಣೆ ಎಸ್ಪಿ ಎಸ್.ಗಿರೀಶ್ ಮಾರ್ಗದರ್ಶನದಲ್ಲಿರಾಮನಗರ ಉಪ ವಿಭಾಗದ ಉಪಾಧೀಕ್ಷಕ ಮೋಹನ್ ಕುಮಾರ್,ಹಾರೋಹಳ್ಳಿ ವೃತ್ತ ನಿರೀಕ್ಷಕ ರಾಮಪ್ಪ ಬಿ.ಗುತ್ತೇರ್ ಅವರ ಸಲಹೆ ಸೂಚನೆಮೇರೆಗೆ ಹಾರೋಹಳ್ಳಿ ಉಪನಿರೀಕ್ಷಕಟಿ.ಮುರಳಿ ನೇತೃತ್ವದ ತಂಡ ಕಾರ್ಯನಿ ರ್ವಹಿಸಿತ್ತು. ತಂಡದಲ್ಲಿ ಬೋರೇಗೌಡ,ಸತೀಶ, ಮಧು, ಮಾಳಪ್ಪ, ಶ್ರೀನಿವಾಸ್,ಜೀಪ್ ಚಾಲಕರಾದ ಶ್ರೀಕಾಂತ್ ಅವರಪರಿಶ್ರಮ ಗಮನಾರ್ಹ. ಈ ವಿಶೇಷತಂಡದ ಕಾರ್ಯಾಚರಣೆಗೆ ಎಸ್ಪಿ ಎಸ್. ಗಿರೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿದ್ದರು :
ಮಗ, ಸೊಸೆ ಬ್ಯಾಂಕ್ ಅಧಿಕಾರಿಗಳು. ಜತೆಗೆ ಈ ಕುಟುಂಬ ಹಾರೋಹಳ್ಳಿ ಬಳಿ ಭೂಮಿಖರೀದಿಸಿ ಫಾರ್ಮ್ ಹೌಸ್‌ನಿರ್ಮಿಸಿಕೊಂಡಿದ್ದರು. ಹೀಗಾಗಿಪರಮೇಶ್ವರ ಮಹತ್ತೋ ಅವರೂಇಲ್ಲೇ ವಾಸವಿದ್ದರು. ಇದು ಶ್ರೀಮಂತ ಕುಟುಂಬ ಎಂದು ಅರಿವಿಗೆ ಬಂದಿದ್ದರಿಂದ ಮಹತ್ತೋ ಅವರನ್ನು ಅಪಹರಿಸಿದ್ದರು. ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಒಡ್ಡಿದರು. ಆದರೆ ಖಾಕಿ ಪಡೆಆರೋಪಿಗಳು ಗಟ್ಟಿಗುಂದಕಾಡಿನಲ್ಲಿ ಅವಿತು ಕುಳಿತಿದ್ದನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದೆ. ಆರೋಪಿಗಳಿಂದ ಒಂದು ಇಂಡಿಕಾ ಕಾರು, 3 ಸ್ಕಾರ್ಫ್ ಬಟ್ಟೆ, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.