ಹುಣಸೂರು: ಚಿಕ್ಕಮ್ಮ-ಮಗನ ಅಕ್ರಮ ಸಂಬಂಧ ಬಯಲಾದ್ದರಿಂದ ಸಮಾಜಕ್ಕೆ ಹೆದರಿ ಇಬ್ಬರು ಜೊತೆಯಾಗಿಯೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮರಳಯ್ಯನಕೊಪ್ಪಲಿನ ನಡೆದಿದೆ.
ಕಸಬಾ ಹೋಬಳಿಗೆ ಸೇರಿದ ಮರಳಯ್ಯನಕೊಪ್ಪಲಿನ ಬೀರೆಗೌಡರ ಪತ್ನಿ ಶೀಲಾ(35) ಹಾಗೂ ಬೀರೇಗೌಡರ ಸಹೋದರ ಶಿವರುದ್ರೇಗೌಡರ ಪುತ್ರ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡ ರಕ್ತ ಸಂಬಂಧಿಗಳು.
ಇಬ್ಬರ ಅಕ್ರಮ ಸಂಬಂಧ ಮನೆಯವರಿಗೆ ತಿಳಿದು ಗಲಾಟೆ ಮಾಡಿದ್ದಾರೆ ಎನ್ನಲಾಗಿದ್ದು, ತಮ್ಮ ಅಕ್ರಮ ಸಂಬಂಧವು ಬೆಳಗಾದರೆ ಊರವರಿಗೆ ತಿಳಿಯುತ್ತದೆಂದು ಹೆದರಿ ಗ್ರಾಮದ ಪಕ್ಕದ ಹೊನ್ನೆಗೌಡನಕೆರೆಗೆ ಚಿಕ್ಕಮ್ಮ-ಮಗ ಹೆದರಿ ಒಟ್ಟಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ವಿವರ: ಇಬ್ಬರೂ ಕಳೆದ ಬುಧವಾರ ಮಧ್ಯರಾತ್ರಿ 2.20ರ ಸಮಯದಲ್ಲಿ ಕೆರೆಯ ಹತ್ತಿರ ಬಂದು, ಟಿ.ವಿ.ಎಸ್ ಬೈಕ್‌ನೊಂದಿಗೆ ಆಗಮಿಸಿ ಕಂಬಳಿ ಮೊಬೈಲ್ ಮತ್ತು ಚಪ್ಪಲಿಗಳನ್ನು ಬಿಟ್ಟು ಕೆರೆಗೆ ಹಾರಿರುವುದು ಪಕ್ಕದ ತೋಟದ ಮನೆಯಲ್ಲಿ ಆಳವಡಿಸಿರುವ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದೆ.
ಗುರುವಾರ ಬೆಳಗ್ಗೆ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಬಿಳಿಕೆರೆ ಠಾಣೆ ಇನ್ಸ್ಪೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಚಪ್ಪಲಿ, ಮೊಬೈಲ್, ಮೊಪೆಡ್ ಇವರದ್ದೆ ಎಂದು ಗುರುತು ಹಿಡಿದ ಕಂಡು ಗ್ರಾಮಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಿ ನೂರಾರು ಸಂಖ್ಯೆಯಲ್ಲಿ ಕೆರೆ ಬಳಿ ಜಮಾಯಿಸಿದರು.
ಗುರುವಾರ ಅಗ್ನಿಶಾಮಕ ದಳದ ಎ.ಎಸ್.ಓ ಸತೀಶ್ ನೇತ್ರತ್ವದ ತಂಡ ಸಾಕಷ್ಟು ಹುಡುಕಾಡಿದರು ಶವ ಸಿಗಲಿಲ್ಲಾ, ಈ ನಡುವೆ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂಬ ಅನುಮಾನ ಸಹ ವ್ಯಕ್ತವಾಯಿತು. ಆದರೆ ಶುಕ್ರವಾರ ಯುವಕ ಕುಮಾರ್ ಶವ ಕೆರೆಯಲ್ಲಿ ತೇಲುತ್ತಿತ್ತು. ಶನಿವಾರ ಶೀಲಾರವರ ಶವ ಪತ್ತೆಯಾಯಿತು. ಇಬ್ಬರ ಶವವನ್ನು ಪ್ರತ್ಯೇಕ ದಿನಗಳಲ್ಲಿ ಶವ ಸಂಸ್ಕಾರ ನಡೆಸಿದರು.
ಬೀರೇಗೌಡರು ಅಕ್ರಮ ಸಂಬಂಧದಿಂದ ಅವಮಾನಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.