ಹುಬ್ಬಳ್ಳಿ: ನಗರದ ಮಹಿಳೆಯೊಬ್ಬರಿಗೆ ತಮಿಳುನಾಡು ಮೂಲದವ ಹಾಗೂ ಸ್ಥಳೀಯ ಮಹಿಳೆ ಸೇರಿ ಇಸ್ರೇಲ್‌ನಲ್ಲಿ ನರ್ಸ್ ಕೆಲಸ ಕೊಡಿಸುವುದಾಗಿ ನಂಬಿಸಿ, ಖೊಟ್ಟಿ ದಾಖಲೆ ಸೃಷ್ಟಿಸಿ 5.73 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ತಮಿಳುನಾಡು ಥೇನಿ ಜಿಲ್ಲೆ ಕಂಬಮ್‌ನ ಸ್ಟಿಫನ್ ಉಥಯಕುಮಾರ ಹಾಗೂ ಇಲ್ಲಿನ ಕಾರವಾರ ರಸ್ತೆ ಮಂಗಳ ಓಣಿಯ ರೂಟ್ ಎ.ಡಿ. ವಂಚಿಸಿದ್ದಾರೆ ಎಂದು ಬಾಸೆಲ್ ಮಿಷನ್ ಹೊಸ ಓಣಿಯ ಸುಪ್ರಿಯಾ ಎಂಬುವರು ಉಪನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ನರ್ಸ್ ಕೆಲಸ ಮಾಡಿಕೊಂಡಿದ್ದ ನನಗೆ 2019ರಲ್ಲಿ ರೂಟ್ ಅವರು ಸ್ಟಿಫನ್‌ನನ್ನು ಪರಿಚಯ ಮಾಡಿಕೊಟ್ಟು, ಇಸ್ರೇಲ್‌ನಲ್ಲಿ ನರ್ಸ್ ಕೆಲಸವಿದೆ ವಿಚಾರಿಸಿ ಎಂದಿದ್ದರು. ಅದರಂತೆ ಕೇಳಿದಾಗಖರ್ಚು ಬರುತ್ತದೆ ಎಂದು ಹಂತ ಹಂತವಾಗಿ ಸ್ಟಿಫನ್ ತನ್ನ ಖಾತೆಗೆ5.73 ಲಕ್ಷ ರೂ. ವರ್ಗಾಯಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಮೊಬೈಲ್ ಫೋನ್‌ಗೆ ಇ-ಮೇಲ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಾರೆ. ಜೊತೆಗೆ ಮೂಲ ಪಾಸ್‌ಪೋರ್ಟ್ ಇಟ್ಟುಕೊಂಡು ವಂಚಿಸಿದ್ದಾರೆ ಎಂದು ಸುಪ್ರಿಯಾ ದೂರು ಕೊಟ್ಟಿದ್ದಾರೆ. ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
………………………………………………………………………………………………………………………………………………………
1.61 ಲಕ್ಷ ರೂ. ಮೌಲ್ಯದ 23 ಕುರಿಗಳ ಕಳವು :
ಹುಬ್ಬಳ್ಳಿ; ಕರಡಿಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿ ಸಾಕಾಣಿಕೆ ಮಾಡುತ್ತಿದ್ದ ಶೆಡ್‌ನಲ್ಲಿ ಅಂದಾಜು 1.61 ಲಕ್ಷ ರೂ.ಮೌಲ್ಯದ 23 ಕುರಿಗಳು ಕಳ್ಳತನವಾಗಿವೆ. ಚನ್ನಬಸಪ್ಪ ಬಿ. ಬೆನಕನ್ನವರ ಎಂಬುವರು ತಮ್ಮ ಜಮೀನಿನಲ್ಲಿ ಕುರಿ ಸಾಕಾಣಿಕೆ ಮಾಡುತ್ತಿದ್ದರು.ಕಳ್ಳರು ಮಾ. 20ರಂದು ತಡರಾತ್ರಿ ಶೆಡ್ಡಿನ ತಂತಿ ಜಾಳಿಗೆ ಕತ್ತರಿಸಿ,ಶೆಡ್‌ದೊಳಗಿನ ಕೌಂಟರ್‌ದಲ್ಲಿದ್ದ 23 ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ