Advertisement

ನಿವೇಶನ-ಸಾಲ ಕೊಡಿಸುವುದಾಗಿ ವಂಚನೆ; ಮಹಿಳೆ ಸೆರೆ

06:16 PM Mar 06, 2021 | Team Udayavani |

ಹುಬ್ಬಳ್ಳಿ: ಅಮಾಯಕರಿಗೆ ಸಾಲ, ನಿವೇಶನ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರರೂ. ಪಡೆದು ವಂಚಿಸಿದ್ದ ಮಹಿಳೆಯನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಹಳೇಹುಬ್ಬಳ್ಳಿ ಅಯೋಧ್ಯೆನಗರ ಶ್ರೀರಾಮ ನಗರದ ಪೂರ್ಣಿಮಾ ಸವದತ್ತಿ ಬಂಧಿ  ತರಾಗಿದ್ದಾರೆ. ಇವರು ಬ್ಯಾಂಕ್‌ನಿಂದಸಾಲ ಕೊಡಿಸುತ್ತೇನೆಂದು 2017ರಿಂದಕೆಲವು ಜನರಿಂದ ಲಕ್ಷಾಂತರ ರೂ.ಇಸಿದುಕೊಂಡಿದ್ದರು. ಆದರೆ ಅವರೆಲ್ಲಬ್ಯಾಂಕಿನಿಂದ ಸಾಲ ಹಾಗೂ ಪ್ಲಾಟ್‌ ಕೊಡಿಸುವಂತೆ ದುಂಬಾಲು ಬಿದ್ದಾಗಇಂದು-ನಾಳೆ ಕೊಡಿಸುತ್ತೇನೆಂದುಅಲೆದಾಡಿಸುತ್ತಿದ್ದರು. ಇದರಿಂದ ರೋಸಿಹೋಗಿದ್ದ ಕೆಲವರು ಪೊಲೀಸರ ಮೊರೆ ಹೋಗಿದ್ದರು. ಸದಾಶಿವ ನಗರದ ಆಕಾಶ ಸಾತಪತಿ ಅವರಿಂದ 2.40 ಲಕ್ಷ ರೂ. ಇಸಿದುಕೊಂಡು ಸತಾಯಿಸಿದಾಗ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪೂರ್ಣಿಮಾ ವಿರುದ್ಧ ದೂರು ಕೊಟ್ಟಿದ್ದರು.

ದೂರಿನನ್ವಯ ಹಳೇಹುಬ್ಬಳ್ಳಿ ಪೊಲೀಸರು ತಲೆಮರೆಸಿಕೊಂಡಿದ್ದ ಪೂರ್ಣಿಮಾ ಅವರನ್ನು ರಾಮದುರ್ಗ ದಲ್ಲಿ ಬುಧವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮನೆಗಳ್ಳತನ ಪ್ರಕರಣ; ಇಬ್ಬರ ಬಂಧನ :

ಹುಬ್ಬಳ್ಳಿ: ವಿದ್ಯಾನಗರ ಹಾಗೂ ಎಪಿಎಂಸಿ ಠಾಣೆ ವ್ಯಾಪ್ತಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿ ಸಿ ವಿದ್ಯಾನಗರ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ, ಅಂದಾಜು 82,500ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಳೇಹುಬ್ಬಳ್ಳಿ ಆನಂದನಗರದ ಮೊಹಮ್ಮದಲಿ ನಾಲಬಂದ ಮತ್ತು ಬಾಣತಿಕಟ್ಟಿಯ ಅಬ್ದುಲಖಾದರ ಮುಜಾವರ ಬಂಧಿತರಾಗಿದ್ದಾರೆ.

Advertisement

ಇವರಿಬ್ಬರಿಂದ ಎಪಿಎಂಸಿ ಠಾಣೆ ವ್ಯಾಪ್ತಿಯ ಮನೆಗಳ್ಳತನಕ್ಕೆ ಸಂಬಂಧಿಸಿ 12ಗ್ರಾಂ ಹಾಗೂ ವಿದ್ಯಾನಗರ ಸಿದ್ದೇಶ್ವರ ಪಾರ್ಕ್‌ ದೇವಿನಗರದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಕಳ್ಳತನಕ್ಕೆ ಸಂಬಂಧಿ ಸಿ 26,500 ರೂ. ಮೌಲ್ಯದ 6 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next