ಗದಗ: ಬೈಕ್ ಮಾಲೀಕರೇ, ರಾತ್ರಿ ಹೊತ್ತು ಮನೆ ಮುಂದೆ ರಸ್ತೆ ಹಾಗೂ ಎಲ್ಲೆಂದರಲ್ಲಿ ಬೈಕ್ ಬಿಡುವಮುನ್ನ ಒಮ್ಮೆ ಯೋಚಿಸಿ. ಇತ್ತೀಚೆಗೆ ಪೆಟ್ರೋಲ್‌ಬೆಲೆ ಸೆಂಚೂರಿಯತ್ತ ದಾಪುಗಾಲಿಡುತ್ತಿದೆ. ಪರಿಣಾಮ ಅವಳಿ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಜೋರಾಗಿದೆ.
ಕಳೆದೆರಡು ದಿನಗಳಿಂದೀಚೆ ನಗರದ ಗಂಗಾಪುರ ಪೇಟೆ, ಸಿದ್ದಲಿಂಗ ನಗರ, ಜವುಳಗಲ್ಲಿ ಹಾಗೂ ಮತ್ತಿತರೆ ಭಾಗದಲ್ಲಿ ಬೈಕ್ ಗಳಿಂದ ಪೆಟ್ರೋಲ್ ಕದ್ದಿರುವ ಪ್ರಕರಣಗಳುವರದಿಯಾಗಿವೆ. ಆಯಾ ಭಾಗದಲ್ಲಿ ರಾತ್ರಿಸಮಯದಲ್ಲಿ ಮನೆ ಮುಂದೆ ನಿಲ್ಲಿಸಿದ್ದಸುಮಾರು ಏಳೆಂಟು ದ್ವಿಚಕ್ರ ವಾಹನಗಳಿಂದಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಮಧ್ಯೆರಾತ್ರಿ 2ರಿಂದ ಬೆಳಗಿನ ಜಾವ 5 ಗಂಟೆ ನಡುವಿನ ಅವಧಿಯಲ್ಲೇ ಕಳ್ಳತನ ನಡೆದಿದೆ ಎಂದು ಬೈಕ್ ಮಾಲೀಕರು ಆರೋಪಿಸಿದ್ದಾರೆ.
ಮಧ್ಯರಾತ್ರಿ ಜನರು ನಿದ್ರೆಯಲ್ಲಿರುವಾಗಲೇ ಪೆಟ್ರೋಲ್‌ಗೆ ಹೊಂಚು ಹಾಕುವ ಕದೀಮರುಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.ಮನೆ ಮುಂಭಾಗದ ರಸ್ತೆ, ಒಂಟಿ ಹಾಗೂಕೀಲಿ ಹಾಕಿರುವ ಮನೆಗಳಲ್ಲಿ ಬೈಕ್‌ಗಳಪೆಟ್ರೋಲ್‌ಗೆ ಕನ್ನ ಹಾಕುತ್ತಿದ್ದಾರೆ. ದ್ವಿಚಕ್ರವಾಹನಗಳ ಪೆಟ್ರೋಲ್ ಪೈಪ್ ಕತ್ತರಿಸಿ, ಪೈಪ್ ಗಳನ್ನು ಖಾಲಿ ಬಾಟಲ್‌ಗಳಿಗಿಟ್ಟು, ಅಲ್ಲಿಂದ ಕಾಲ್ಕೀಳುತ್ತಾರೆ. ಕೆಲ ಸಮಯದ ನಂತರ ಬಂದು ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ಪರಾರಿಯಾಗುತ್ತಿದ್ದಾರೆ. ಈ ನಡುವೆ ರವಿವಾರ ಬೆಳಗಿನ ಜಾವ ಗಂಗಾಪುರ ಪೇಟೆಯ ಮಲ್ಲೇಶ ಬಿಂಗಿ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಕನ್ನ ಹಾಕಿದ್ದರು. ಇದನ್ನು ಮನೆಯವರು ಗಮನಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎನ್ನುತ್ತಾರೆ ಮಲ್ಲೇಶ್ ಬಿಂಗಿ.
ಜನರಿಗೆ ಪೆಟ್ರೋಲ್ ಸಂಕಟ: ಈಗಾಗಲೇ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದರಿಂದ ಜನರು ಜೇಬಿಗೆ ಭಾರ ಬೀಳುತ್ತಿದೆ. ಆದರೆ, ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಬೈಕ್‌ಗಳು ಅನಿವಾರ್ಯ. ಹೀಗಾಗಿ ಕೆಲವರು ಒಂದು ಬಾರಿಗೆ ಸುಮಾರು 200ರಿಂದ 500 ರೂ. ವರೆಗೆ ಪೆಟ್ರೋಲ್ ತುಂಬಿಸುತ್ತಾರೆ. ಇಂತಹ ಬೈಕ್‌ಗಳನ್ನೇ ಕಳ್ಳರು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪೆಟ್ರೋಲ್ ಕಳ್ಳತನಗಳಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ. ಪೆಟ್ರೋಲ್ ಕಳ್ಳತನ ತಪ್ಪಿಸಲು ಕೆಲವರು ತಮ್ಮ ಬೈಕ್‌ನ ಪೆಟ್ರೋಲ್‌ಟ್ಯಾಂಕ್‌ಗಳಿಗೆ ಕೀಲಿ ಅಳವಡಿಸುತ್ತಿದಾರೆ. ಇನ್ನೂ,ಕೆಲವರು ಬೈಕ್‌ಗಳನ್ನು ಕಾಂಪೌಂಡ್ ಒಳಗೆನಿಲ್ಲಿಸಿದರೆ, ಜಾಗ ಇಲ್ಲದವರು ರಸ್ತೆಯಲ್ಲೇ ನಿಲ್ಲಿಸಿ, ರಾತ್ರಿಯಿಡೀ ಆಗಾಗ ನಿಗಾ ವಹಿಸುತ್ತಿದ್ದಾರೆ.ಒಟ್ಟಾರೆ, ಪೆಟ್ರೋಲ್ ಕಳ್ಳರು ಜನರ ನಿದ್ದೆಕಸಿದಿದ್ದಾರೆ. ಆದರೆ, ಈ ಕುರಿತು ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.