Advertisement

ಅನಾರೋಗ್ಯದಿಂದ ಮಹಿಳೆ ಸಾವು : ಜೆಸಿಬಿ ಯಂತ್ರದಲ್ಲೇ ಮೃತದೇಹ ಸಾಗಣೆ

03:27 PM May 01, 2021 | Team Udayavani |

ಚಿಂತಾಮಣಿ: ಕೋವಿಡ್ ಗೆ ಹೆದರಿ ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಮಾಡಲು ಜನರು ಹಿಂದೇಟು ಹಾಕಿದ್ದರಿಂದ ಜೆಸಿಬಿ ಯಂತ್ರ ಬಳಸಿ, ಅಂತ್ಯ ಸಂಸ್ಕಾರ ಮಾಡಿದ ಘಟನೆ ತಾಲೂಕಿನ ಕುರಟಹಳ್ಳಿಯಲ್ಲಿ ನಡೆದಿದೆ.

Advertisement

ಮೃತ ಮಹಿಳೆ ಚಂದ್ರಕಲಾ. ಗುರುವಾರ ಬೆಳಗ್ಗೆ ತಾಲೂಕಿನ ಕುರಟಹಳ್ಳಿಯ ಹೋಟೆಲ್‌ ಬಳಿ ತನ್ನ ಮಗಳ ತೊಡೆಯ ಮೇಲೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.ಕೋವಿಡ್  ಸೋಂಕಿನಿಂದ ಸಾವನ್ನಪ್ಪಿರ ಬ ಹುದು ಎಂದು ಹೆದರಿದ ಜನರು ಹತ್ತಿರಕ್ಕೆ ಬರಲು ಹಿಂದೇಟು ಹಾಕಿದರು. ನಂತರ ಜೆಸಿಬಿಯಂತ್ರದ ಮೂಲಕ ಮೃತದೇಹ ಆಸ್ಪತ್ರೆಗೆ ಸಾಗಿಸಿ ಪರೀಕ್ಷೆ ಮಾಡಿಸಿ, ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಲಾ ಅವರ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ನಂತರ ಇವರು ಅನಾಥರಂತೆ ಚಿಂತಾಮಣಿ ಯಲ್ಲಿ ಕೂಲಿ ಕೆಲಸಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಇನ್ನು ಕಳೆದ ಒಂದು ವಾರದಿಂದ ಅನಾ ರೋಗ್ಯದಿಂದಬಳಲುತ್ತಿದ್ದ ಚಂದ್ರಕಲಾ, ತನ ° ಮಗಳೊಂದಿಗೆ ಕುರಟ ಹಳ್ಳಿಯ ಹೋಟೆಲ್‌ ಒಂದರ ಬಳಿ ಮಲಗಿದ್ದಾರೆ.

ಈ ವೇಳೆಗ್ರಾಮಸ್ಥರು ಬುಧವಾರ ರಾತ್ರಿ ಅವರ ಯೋಗಕ್ಷೇಮ ವಿಚಾರಿಸಿ ಊಟ ನೀಡಿ, ಬೆಳಗ್ಗೆ ಆಸ್ಪತ್ರೆಗೆ ಸೇರಿ ಸು ವಂತೆ ಮಗಳಿಗೆ ಹೇಳಿದ್ದಾರೆ. ಆದರೆ, ಗುರು ವಾರ ಬೆಳಗಿನ ಜಾವ ಮಗಳು ತನ್ನ ತಾಯಿ ಯನ್ನು ಎಬ್ಬಿಸಲು ಯತ್ನಿಸಿದಾಗ ತಾಯಿ ಮೃತಪಟ್ಟಿರುವುದು ಗೊತ್ತಾಗಿದೆ. ಈ ವೇಳೆ ಗ್ರಾಮಸ್ಥರು ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಜೆಸಿಬಿ ಯಂತ್ರದ ಮೂಲಕ ಸಾಗಿಸಿ, ಶವ ಪರೀಕ್ಷೆ ಮಾಡಿಸಿ, ನಂತರ ಅದೇ ಜೆಸಿಬಿ ಯಂತ್ರದಲ್ಲಿ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next