Advertisement

ಅರಣ್ಯ ಇಲಾಖೆ ಸಿಬಂದಿ ವಶದಲ್ಲಿದ್ದ ವ್ಯಕ್ತಿ ಸಾವು: ಹಲ್ಲೆಯಿಂದ ಸಾವು; ಗ್ರಾಮಸ್ಥರ ಆರೋಪ

10:01 PM Oct 20, 2022 | Team Udayavani |

ಚಿಕ್ಕಮಗಳೂರು: ಅರಣ್ಯ ಇಲಾಖೆಯ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ಶಿವಮೊಗ್ಗ ಮೂಲದ ರವಿ ಅವರ ಮೃತದೇಹ ಪತ್ತೆಯಾಗಿದ್ದು, ಸಿಬಂದಿ ವಿರುದ್ಧ ಗ್ರಾಮಸ್ಥರು ಕೊಲೆ ಆರೋಪ ಮಾಡಿದ್ದಾರೆ.

Advertisement

ಆದರೆ ಅರಣ್ಯ ಇಲಾಖೆ ಸಿಬಂದಿಯು ಇದನ್ನು ನಿರಾಕರಿಸಿದ್ದು, ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿ ದ್ದಾನೆ ಎಂದು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬಂದಿ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಡೂರು ತಾಲೂಕು ಸಖರಾಯ ಪಟ್ಟಣ ಠಾಣೆ ವ್ಯಾಪ್ತಿಯ ಕಲ್ಲೋಳ ಕೋಟೆ ಆನೆ ಶಿಬಿರದ ಶೌಚಾಲಯ ಕೊಠಡಿಯಲ್ಲಿ  ಮೃತದೇಹ ಪತ್ತೆಯಾಗಿದೆ.

ಶ್ರೀಗಂಧ ಕಳವು ಆರೋಪದಲ್ಲಿ ವಶಕ್ಕೆ:

ಅರಣ್ಯ ಇಲಾಖೆ ಸಿಬಂದಿ ಹೇಳುವ ಪ್ರಕಾರ, ಬುಧವಾರ ರಾತ್ರಿ ಇಬ್ಬರು ಶ್ರೀಗಂಧ ಕಳ್ಳತನಕ್ಕೆ ಯತ್ನಿಸಿದ್ದು, ಅವರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ರವಿ ಅವರು ಶೌಚಾಲಯಕ್ಕೆ ತೆರಳಿದ್ದಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಬಿದಿರು ಕಡಿಯಲು ಹೋಗಿದ್ದರು: ಗ್ರಾಮಸ್ಥರು ರವಿ ಹಾಗೂ ಮತ್ತೂಬ್ಬರು  ಬಿದಿರು ಕಡಿಯಲು ಅರಣ್ಯಕ್ಕೆ ಹೋಗಿದ್ದು,  ಅವರ ಮೇಲೆ ಅರಣ್ಯ ಇಲಾಖೆ ಸಿಬಂದಿ ಹಲ್ಲೆ ಮಾಡಿದ್ದರಿಂದಲೇ  ರವಿ ಮೃತಪಟ್ಟಿದ್ದಾರೆ.  ಇಲಾಖೆಯ ವಸತಿ ಗೃಹದಲ್ಲಿ ಹಲ್ಲೆ ನಡೆಸಿದ್ದು, ಮೃತಪಟ್ಟ ಬಳಿಕ ಶಿಬಿರದ ಶೌಚಾಲಯದಲ್ಲಿ ಮೃತದೇಹವನ್ನು ಇರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಮುಂಭಾಗದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಸಿಬಂದಿ ಜತೆ ವಾಗ್ವಾದ ನಡೆಸಿದರು. ಸಖರಾಯಪಟ್ಟಣ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next