Advertisement

ಅಗ್ನಿಶಾಮಕ ದಳ ಕಚೇರಿಯಲ್ಲಿಯೇ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ-ಬಾಡೂಟ

12:36 PM May 30, 2021 | Team Udayavani |

ಬೆಳಗಾವಿ: ಅಥಣಿ ಪಟ್ಟಣದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕಚೇರಿ ಆವರಣದಲ್ಲಿಯೇ ರಾಜಾರೋಷವಾಗಿ ಮದ್ಯ, ಬಾಡೂಟದ ಪಾರ್ಟಿ ನಡೆಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಮಧ್ಯಾಹ್ನದ ಹೊತ್ತಿನಲ್ಲಿ ಅಥಣಿಯ ಅಗ್ನಿ ಶಾಮಕ ದಳದ ನಾಲ್ಕೈದು ಜನ ಸಿಬ್ಬಂದಿಗೆ ಯರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲದಂತಾಗಿದೆ. ಸಾರಾಯಿ ಬಾಟಲಿ ಹಾಗೂ ಬಾಡೂಟದ ಭರ್ಜರಿ ಪಾರ್ಟಿ ನಡೆಸುತ್ತಿರುವ ವಿಡೊಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ : ಮೆಹುಲ್ ಚೋಕ್ಸಿಯನ್ನು ನಮಗೆ ಹಸ್ತಾಂತರಿಸಿ: ಡೊಮೆನಿಕಾಗೆ ಭಾರತ ಆಗ್ರಹ

ಸಿಬ್ಬಂದಿ ಶಿಸ್ತು ಮರೆತು ಹೀಗೆ ಹಗಲು ಹೊತ್ತಿನಲ್ಲಿಯೇ ಪಾರ್ಟಿ ಮಾಡುತ್ತಿರುವುದು ಸಾರ್ವಜನಿಕರ‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ.‌ ಲಾಕ್ ಡೌನ್ ವೇಳೆ ಇಂಥ ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮದವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಆಗ ಇದನ್ನು ಕಂಡ ಕೂಡಲೇ  ಊಟ ಮಾಡುತ್ತಿದ್ದೇವೆ ಎಂದು ಸಬೂಬು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next