Advertisement

ಅಂಕೋಲಾ: ಪಟ್ಟಣದ ಹಳೆ ಅಂಗಡಿಯೊಂದರ ಎದುರು ವ್ಯಕ್ತಿ ಶವ ಪತ್ತೆ

12:47 PM Dec 24, 2022 | Team Udayavani |

ಅಂಕೋಲಾ: ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಪಕ್ಕದ ಹಳೆಯ ಅಂಗಡಿಯೊಂದರ ಮುಂದೆ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿರುವ ಘಟನೆ  ನಡೆದಿದೆ.

Advertisement

ಗಣೇಶ ರಘುವೀರ ಪ್ರಭು  ಎಂಬುವವನೆ ಮೃತ ವ್ಯಕ್ತಿ. ಅದಾವುದೋ ಕಾರಣದಿಂದ ಕುಟುಂಬದಿಂದ ದೂರ ಉಳಿದಿರುವ ಸಾಧ್ಯತೆ ಕೇಳಿ ಬಂದಿದ್ದು, ಕಳೆದ ಕೆಲ ಕಾಲದಿಂದ ಅಂಕೋಲಾದಲ್ಲಿ ಬಂದು ನೆಲೆಸಿದ್ದು, ಇತ್ತೀಚಿನ ದಿನಗಳಲ್ಲಿ ಕಣಕಣೇಶ್ವರ ದೇವಸ್ಥಾನದ ಪಕ್ಕದ ಹಳೆಯ ಅಂಗಡಿ ಮುಂಭಾಗದ ಖಾಲಿ ಜಾಗದಲ್ಲಿ  ಹೆಚ್ಚಿನ ಹೊತ್ತು ಕಳೆದು ರಾತ್ರಿ ವೇಳೆ ಇಲ್ಲೇ ಮಲಗುತ್ತಿದ್ದ ಎನ್ನಲಾಗಿದೆ.

ಈತನಿಗೆ ಅಕ್ಕ ಪಕ್ಕದ ನಿವಾಸಿಗಳು, ದಾರಿಹೋಕರು, ಇತರರು ಆಗಾಗ ನೀರು, ಆಹಾರ ನೀಡುತ್ತಿದ್ದರು. ಶುಕ್ರವಾರವೂ ಅದೇ ಸ್ಥಳದಲ್ಲಿ ಮಲಗಿದ್ದವನು ಬೆಳಗಾಗುವ ಹೊತ್ತಿಗೆ ಶವವಾಗಿ ಪತ್ತೆಯಾಗಿದ್ದಾನೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next