Advertisement
ಈ ಜಾತಿ ಪ್ರತಿಷ್ಠೆಯ ರಾಜಕಾರಣ, ಡಿಸಿಸಿ ಬ್ಯಾಂಕ್ ಅನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆಯೋ ಎಂಬ ಆತಂಕ ಸಹಕಾರ ವಲಯದಲ್ಲಿ ಮೂಡಿದೆ. ಹೌದು. ಪ್ರಸ್ತುತ 2020-25ನೇ ಸಾಲಿನ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಿಂದ ಹಿಡಿದು ನಿನ್ನೆ ನಡೆದ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಆಯ್ಕೆಯಲ್ಲೂ ಪ್ರತಿಷ್ಠೆ ನಡೆದಿವೆ. ಪ್ರತಿ ಬಾರಿ ಡಿಸಿಸಿ ಬ್ಯಾಂಕ್ ಸಭೆ ನಡೆದರೂ ಅದು ಸುದ್ದಿಯಾಗುತ್ತಿರಲಿಲ್ಲ.
Related Articles
Advertisement
ಎಂಬುದನ್ನು ಇಡೀ ನಿರ್ದೇಶಕರ ಸಭೆಯಲ್ಲೇ ಸ್ಪಷ್ಟಪಡಿಸಿದ್ದಾರೆಂದು ಬಿಜೆಪಿಯ ಮೂಲಗಳುಖಚಿತಪಡಿಸಿವೆ. ನನ್ನ ಕುಟುಂಬಕ್ಕೆ ಎರಡು ಬಾರಿ ಅನ್ಯಾಯ: ಡಿಸಿಸಿ ಬ್ಯಾಂಕ್‌ನಲ್ಲಿ ಏನೇ ಮಾಡಿದರೂ ರಡ್ಡಿ ಸಮುದಾಯ ಹೊರಗಿಟ್ಟು ಮಾಡೋಣ ಎಂದು ಚರ್ಚೆ ಮಾಡಿದ್ರಿ.
ಜಿಪಂನಲ್ಲಿ ನನ್ನ ಪತ್ನಿಗೆ ಎರಡು ಬಾರಿ ಅಧ್ಯಕ್ಷರಾಗುವ ಅವಕಾಶವಿದ್ದರೂ ನಮ್ಮವರೇ ತಪ್ಪಿಸಿದರು. ಡಿಸಿಸಿ ಬ್ಯಾಂಕ್ ನಲ್ಲಿ ನಮ್ಮ ಸಮುದಾಯ ದೂರವಿಡಲು ಚರ್ಚೆ ಮಾಡಿದ್ದಲ್ಲದೇ, ನನ್ನ ಪತ್ನಿಗೆ ಸಿಗಬೇಕಿದ್ದ ಅವಕಾಶ ಸಿಗದಂತಾಯಿತು. ಇಷ್ಟೆಲ್ಲ ಆದರೂ ನಾನು ಸುಮ್ಮನೆ ಇರಬೇಕಾ. ಹೀಗಾಗಿ ನಾನು ಸರನಾಯಕರ ಪರ ನಿಲ್ಲಬೇಕಾಯಿತು ಎಂದು ಓರ್ವ ಬಿಜೆಪಿಯ ನಿರ್ದೇಶಕರು ಹೇಳಿದರೆ, ನನಗೆ ಸರನಾಯಕ ಅತ್ಯಂತ ವಿಶ್ವಾಸಿಕ ನಾಯಕರು. ಹೀಗಾಗಿ ನಾನೂ ಅವರ ಪರವಾಗಿದ್ದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ಮಾತು ಕೇಳಿದ ಬಿಜೆಪಿಯ ಕೆಲ ನಿರ್ದೇಶಕರು ತೀವ್ರ ಅಸಮಾಧಾನಗೊಂಡರು. ನೀವು ಈ ರೀತಿ ಅಡ್ಡ ಮತದಾನ ಮಾಡುವುದಿದ್ದರೆ ನಮ್ಮನ್ನು ಚುನಾವಣೆಗೆ ನಿಲ್ಲಿಸಿ, ಅವಮಾನ ಏಕೆ ಮಾಡಿದ್ರಿ. ಕೇಂದ್ರ, ರಾಜ್ಯದಲ್ಲಿ ನಾವು ಅಧಿಕಾರದಲ್ಲಿದ್ದೆವು. ಜಿಲ್ಲೆಯಲ್ಲಿ ಡಿಸಿಎಂ, ಹಲವು ಶಾಸಕರು ಇದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ನಾವು 8 ಜನ ನಿರ್ದೇಶಕರಿದ್ದೇವೆ. ಆದರೂ ನಮ್ಮ ಪಕ್ಷ ಅಧಿಕಾರ ವಂಚಿತವಾಯಿತು. ಇದು ಪಕ್ಷ, ಹಿರಿಯರು, ನಮಗೆ ಅವಮಾನ. ಈಗ ಅಪೆಕ್ಸ್ ಬ್ಯಾಂಕ್‌ಗೆ ಅವಕಾಶ ಕೇಳಿ ಏನ್ ಮಾಡ್ತೀರಿ ಎಂದು ಕೆಲ ನಿರ್ದೇಶಕರು ನೇರವಾಗಿಯೇ ಹೇಳಿದರೆಂದು ಮೂಲಗಳು ತಿಳಿಸಿವೆ.
ಸವದಿ ಸುತ್ತ ಅಧಿಕಾರ ಗಿರಕಿ: ಅಧಿಕಾರ ವಿಕೇಂದ್ರೀಕರಣ ಮಾತು ಎಲ್ಲೆಡೆ ಕೇಳಿಬಂದರೂ ತೇರದಾಳದ ಶಾಸಕ ಸಿದ್ದು ಸವದಿ ವಿಷಯದಲ್ಲಿ ಅದು ಕೇಂದ್ರೀಕೃತವಾಗಿದೆ. ಶಾಸಕರಾದ ಬಳಿಕ ಕೆಎಚ್‌ಡಿಸಿ ನಿಗಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ, ತಾವು ಹೇಳಿದ ವ್ಯಕ್ತಿಗೆ ಅಪೆಕ್ಸ್ ಬ್ಯಾಂಕ್‌ನಿಂದ ನಾಮಕರಣ, ಇದೀಗ ತಾವು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಎಲ್ಲವೂ ಅವರಿಗೆ ಲಭಿಸಿವೆ. ಎಲ್ಲವೂ ಬೇಡ ಬೇಡ ಎನ್ನುತ್ತಲೇ ಅವರು ಪಡೆದಿರುವುದು ಕುತೂಹಲದ ಸಂಗತಿ.
ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್ ಗೆ ಆಯ್ಕೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವುದಿದ್ದರೆ ಹೊಸದಾಗಿ ಆಯ್ಕೆಯಾದ ಇಲ್ಲವೇ ಬೇರೆ ಬೇರೆ ಅಧಿಕಾರ ಸಿಗದವರಿಗೆ ಅವಕಾಶ ಕಲ್ಪಿಸಬಹುದಿತ್ತು. ಅಲ್ಲದೇ
ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿ, ತಮ್ಮದೇ ಪಕ್ಷದ ಇಬ್ಬರು ನಿರ್ದೇಶಕರ ಅಡ್ಡ ಮತದಾನದಿಂದ ಬಿದ್ದಿದ್ದ ಕುಮಾರಗೌಡ ಜನಾಲಿ, ಪ್ರಕಾಶ ತಪಶೆಟ್ಟಿ ಅವರಲ್ಲಿ ಒಬ್ಬರಿಗೆ ಈ ನೀಡಿದ್ದರೂ ಅವರಿಗೆ ಅವಕಾಶ ನೀಡಿದ ಖ್ಯಾತಿ ಪಕ್ಷ ಹಾಗೂ ಪಕ್ಷದ ಹಿರಿಯರಿಗೆ ದೊರೆಯುತ್ತಿತ್ತು. ಈಗಾಗಲೇ 3-4 ಹುದ್ದೆ ಇದ್ದವರಿಗೆ ಮತ್ತೂಂದು ಹುದ್ದೆ ಕೊಡಲಾಗಿದೆ. ಹಸಿವಿಲ್ಲದನಿಗೆ ಒತ್ತಾಯ ಮಾಡಿ ಊಟ ಮಾಡಿಸಿದಂತೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಆಯ್ಕೆ ವಿಷಯದಲ್ಲೂ ಆಗಿದೆ
ಶಿಸ್ತು ಕ್ರಮ ಕೈಗೊಳ್ಳಲಿಲ್ಲವೇ ಬಿಜೆಪಿ?
ಸಹಕಾರ ರಂಗದ ಹಿರಿಯ ಮುತ್ಸದ್ಧಿ ಭೀಮಶಿ ಮಗದುಮ್ ಬನಹಟ್ಟಿಯಲ್ಲಿ ಸೋತರು.ಇನ್ನು ಜಮಖಂಡಿ ಬಿ.ಎಸ್. ಸಿಂಧೂರ ಅವರನ್ನು ಸೂಕ್ತ ದಾಖಲಾತಿ ಇಲ್ಲದೇ ಪಕ್ಷದಿಂದ ಉಚ್ಛಾಟಿಸಲಾಯಿತು. ಆದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಅಡ್ಡ ಮಾತದಾನ ಮಾಡಿದ್ದು ನಾವೇ ಎಂದು ಒಪ್ಪಿಕೊಳ್ಳುವ ಜತೆಗೆ, ಏಕೆ ಮಾಡಿದ್ದೇವೆ ಎಂಬುದನ್ನೂ ಆ ಇಬ್ಬರು ನಿರ್ದೇಶಕರು ಹೊಸ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಬೆಂಬಲಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಜಿಲ್ಲಾ ಘಟಕ ಶಿಸ್ತು ಕ್ರಮ ಕೈಗೊಳ್ಳಲು ಇಷ್ಟು ಸಾಕಲ್ಲವೇ. ತನಿಖಾ ಸಮಿತಿ ಮಾಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ, ದಿನ ದೂಡುತ್ತಿರುವ ಬಿಜೆಪಿ, ಇಂತಹ ವಿಷಯದಲ್ಲಿ ಒಮ್ಮೆ ಕಠಿಣ ನಿರ್ಧಾರ ಕೈಗೊಂಡರೆ ಅದು ಇತರರಿಗೂ ಪಾಠವಾಗಲಿದೆ. ಆದರೆ ಅದು ಸಾಧ್ಯವೇ ಇಲ್ಲ ಎಂಬ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಶ್ರೀಶೈಲ ಕೆ. ಬಿರಾದಾರ