Advertisement

Mangaluru ಉಂಡೆ ಕೊಬ್ಬರಿ ಖರೀದಿಗೆ ಪ್ರೋತ್ಸಾಹ ಧನ ನಿಗದಿ

11:54 PM Feb 05, 2024 | Team Udayavani |

ಮಂಗಳೂರು: ಉಂಡೆ ಕೊಬ್ಬರಿಗೆ ಕೇಂದ್ರದ ಬೆಂಬಲ ಬೆಲೆ ದರ ಪ್ರತೀ ಕ್ವಿಂಟಲ್‌ಗೆ 12 ಸಾವಿರ ರೂ. ಆಗಿದ್ದು, 2023ನೇ ಸಾಲಿಗೆ ಘೋಷಿಸಲಾದ ರಾಜ್ಯ ಸರಕಾರದ ಪ್ರೋತ್ಸಾಹ ಧನ ಪ್ರತೀ ಕ್ವಿಂಟಲ್‌ಗೆ 1,250 ರೂ. ಜತೆಗೆ 2024ನೇ ಸಾಲಿಗೆ ಪ್ರತೀ ಕ್ವಿಂಟಲ್‌ಗೆ 250 ರೂ. ಸೇರಿ ಒಟ್ಟು 1,500 ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ.

Advertisement

ಅಗತ್ಯ ದಾಖಲೆಗಳು: ರೈತರು ಹೆಸರನ್ನು FRUITS ತಂತ್ರಾಂಶದಲ್ಲಿ ನೋಂದಾಯಿಸಬೇಕು. ರೈತರ ಬಳಿ FRUITS ID ಇಲ್ಲದಿದ್ದಲ್ಲಿ ಅಥವಾ FRUITSನಲ್ಲಿ ಮಾಹಿತಿ ಲಭ್ಯವಿಲ್ಲದ್ದಲ್ಲಿ ಕೃಷಿ ಇಲಾಖೆಯನ್ನು ಸಂಪ ರ್ಕಿಸಬಹುದು. ಆಧಾರ್‌, ಬ್ಯಾಂಕ್‌ ಖಾತೆ ಪುಸ್ತಕದ ನಕಲು, ಎಫ್‌ಎಕ್ಯು ಗುಣಮ ಟ್ಟದ ಉಂಡೆ ಕೊಬ್ಬರಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಲು ತರಬೇಕು.

ರೈತರು ತಮ್ಮ ಹೆಸರನ್ನು ಫೆ. 12ರ ಒಳಗೆ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ ಚೀಟಿ ಪಡೆಯಬೇಕು. ಉಂಡೆ ಕೊಬ್ಬರಿ ಉತ್ಪನ್ನಗಳನ್ನು ಎ. 9ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಖರೀದಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next