ತುಮಕೂರು: ಜಿಲ್ಲೆಯಲ್ಲಿ ಸಾವಯವ ಕೃಷಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ, ರೈತ ರಲ್ಲಿ ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆಯಲು ಅರಿವು ಮೂಡಿಸುವುದಾಗಿ ಜಿಲ್ಲಾ ಪ್ರಾಂತೀಯ ಸಹ ಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದಯ್ಯ ತಿಳಿಸಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಪಾಂತ್ರಿಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಚುನಾವಣೆ ಯಲ್ಲಿ ನಿರ್ದೇಶಕರು ಮತ್ತು ಅಧ್ಯಕ್ಷರು ಅವಿರೋಧವಾಗಿ ಆಯ್ಕೆ ಆಯ್ಕೆಯಾದ ನಂತರ ಮಾತನಾಡಿ, ಕೃಷಿ ಇಲಾಖೆ ಸಹಯೋಗದೊಂದಿಗೆ ಸಾವಯವ ಕೃಷಿಗೆ ಉತ್ತೇಜನ ನೀಡುವುದರೊಂದಿಗೆ ಸಾವ ಯವ ಕೃಷಿಗೆ ಉತ್ತಮ ಮಾರುಕಟ್ಟೆಯನ್ನು ನಿರ್ಮಾಣ ಮಾಡುವ ಗುರಿ ಹೊಂದಲಾ ಗಿದ್ದು, ಈಗಾಗಲೇ ಸಿರಿಧಾನ್ಯವನ್ನು ಸಾವಯವ ಕೃಷಿಯಲ್ಲಿ ಮಾಡುವ ರೈತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯ ಕ್ಷೇತ್ರವನ್ನು ವಿಸ್ತರಿಸಲಾಗುವುದು ಎಂದರು.
ಒಕ್ಕೂಟದಿಂದ ಸ್ಥಾಪನೆಯಾದ ಸಿರಿಧಾನ್ಯ ಸಂಸ್ಕರಣಾ ಘಟಕ ಉತ್ತಮವಾಗಿಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಖರೀದಿಯಲ್ಲಿ ತೊಡಗಿರುವುದು ಸಂತಸದ ಸಂಗತಿ. ಸಾವಯವ ಕೃಷಿ ಉತ್ತೇಜನವೇ ಒಕ್ಕೂಟದ ಪ್ರಮುಖ ಉದ್ದೇಶ ಎಂದರು. ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ಮಾತನಾಡಿ, ಸಾವಯವಕೃಷಿಗೆ ಸರ್ಕಾರದಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾವಯವ ಕೃಷಿ ಯೋಜನೆಯಡಿ ಇಲಾಖೆ ಬೆಂಬಲ ನೀಡುತ್ತಿದೆ. ಮಳೆಯಾಶ್ರೀತ ಪ್ರದೇಶದಲ್ಲಿ ಸಿರಿಧಾನ್ಯಬೆಳೆಯುವ ರೈತರಿಗೆ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಿರಿ ಎಂದರು.
ಇದನ್ನೂ ಓದಿ:ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್
ನೂತನ ಉಪಾಧ್ಯಕ್ಷರಾಗಿ ಚಂದ್ರಶೇಖರಯ್ಯ, ನಿರ್ದೇಶಕರಾಗಿ ಎನ್.ವಿ. ನಂಜುಂಡಾ ರಾಧ್ಯ, ಎ.ಬಿ.ಮಹೇಶ್, ಜಿ. ಕುಮಾ ರಸ್ವಾಮಿ, ಬೋರೇಗೌಡ, ಗೋವಿಂದಯ್ಯ, ಎ.ಎಸ್.ಚಂದ್ರ ಶೇಖರಯ್ಯ, ಟಿ.ಪ್ರಕಾಶ್, ಕೆ.ಆರ್.ಶಿವಕುಮಾರ್, ಸರೋಜಮ್ಮ, ಹೆಚ್.ವಿ. ಷಡಾಕ್ಷರಿ, ಸಿ.ಎಚ್.ದೇವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಒಕ್ಕೂಟಕ್ಕೆ ಜಿಲ್ಲಾ ಒಕ್ಕೂಟದಿಂದ ಕೆ.ಆರ್.ಶಿವಕುಮಾರ್ ಅವರನ್ನು ಆಯ್ಕೆ ಮಾಡಿರುವುದಾಗಿ ಚುನಾವಣಾಧಿಕಾರಿ ಜೆ.ಎಸ್.ಪಾರ್ಥ ಅವರು ಘೋಷಿಸಿದರು. ಒಕ್ಕೂಟದ ಸಿಇಒ ಆರ್.ಕೆ.ಮಧು, ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.