ಕುಂದಾಪುರ: ಸಂರಿಧ್ ಪ್ರಾಕೃತಿಕ ಚಿಕಿತ್ಸಾಲಯ ಮತ್ತು ಯೋಗ ಕೇಂದ್ರ ಕುಂದಾಪುರದ ಸೂರ್ನಳ್ಳಿ ರಸ್ತೆಯ ಲ್ಲಿರುವ ನಿರ್ಮಾಣ್ ಎಂಪೋರಿಯಂ ಕಟ್ಟಡದ ಮೊದಲನೇ ಮಹಡಿಯಲ್ಲಿ ಶುಕ್ರವಾರ ಉದ್ಘಾಟನೆ ಗೊಂಡಿತು.
ಹಿರಿಯ ವಕೀಲ ಎ.ಎಸ್.ಎನ್. ಹೆಬ್ಟಾರ್ ಕಾರ್ಯಕ್ರಮ ಮಾತನಾಡಿ, ನಮ್ಮ ದೇಶವು ಯೋಗವನ್ನು ಪ್ರಪಂಚಕ್ಕೆ ಪರಿಚಯಿಸುವ ಮೂಲಕ ಬಲುದೊಡ್ಡ ಕೊಡುಗೆ ನೀಡಿದೆ. ಶಸ್ತ್ರಚಿಕಿತ್ಸೆಯನ್ನು ಕೂಡ ನಾವೇ ನೀಡಿದ್ದು. ಈ ಪುರಾಣದಲ್ಲಿಯೇ ಉಲ್ಲೇಖವಿದೆ. ವಿಜ್ಞಾನ, ಅಧ್ಯಾತ್ಮಕ್ಕೆ ಭಾರತೀಯರ ಕೊಡುಗೆ ಅಪಾರ. ಆರೋಗ್ಯ ಹಾಗೂ ಸುಖಮಯ ಜೀವನಕ್ಕೆ ಯೋಗ ಸಹಕಾರಿ. ಆ ನಿಟ್ಟಿನಲ್ಲಿ ಈ ಪ್ರಕೃತಿ ಚಿಕಿತ್ಸಾಲಯ ಕುಂದಾಪುರದ ಜನರಿಗೆ ಪ್ರಯೋಜನವಾಗಲಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ಥÂ ಕಾಪಾಡುವಲ್ಲಿ ಯೋಗದ ಪಾತ್ರ ಪ್ರಮುಖವಾಗಿದ್ದು, ನಿಸರ್ಗದತ್ತ ಚಿಕಿತ್ಸೆ ಇಂದಿನ ಅಗತ್ಯ ಎಂದು ಉತ್ತಮ್ ಹೋಮಿಯೋಪತಿ ಕ್ಲಿನಿಕ್‌ನ ಡಾ| ಉತ್ತಮ್ ಕುಮಾರ್ ಶೆಟ್ಟಿ ಹೇಳಿದರು.
ಕುಂದಾಪುರ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎ.ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಹದ ಆರೋಗ್ಯ ಕಾಪಾಡುವಲ್ಲಿ ಯೋಗ, ಹೋಮಿಯೋ ಪತಿ ಈಗ ಪ್ರಮುಖವಾಗಿದ್ದು, ಇದರಿಂದ ಯಾವುದೇ ದುಷ್ಪರಿ ಣಾಮ ಬೀರುವುದಿಲ್ಲ. ಈ ಯೋಗ ಕೇಂದ್ರದ ಪ್ರಯೋಜನ ಎಲ್ಲರೂ ಪಡೆಯುವಂತಾಗಲಿ ಎಂದರು.
ವಿಧಾನಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿ ಶುಭ ಹಾರೈಸಿದರು. ಇದಕ್ಕೂ ಮೊದಲು ವಿಶ್ವ ದಿನದ ಅಂಗವಾಗಿ ಬೆಳಗ್ಗೆ ಯೋಗದ ಕುರಿತು ಪ್ರಾತ್ಯಕ್ಷಿಕೆ , ತರಬೇತಿ ನಡೆಯಿತು.
ಡಾ| ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಂರಿಧ್ ಪ್ರಾಕೃತಿಕ ಚಿಕಿತ್ಸಾಲಯ ಮತ್ತು ಯೋಗ ಕೇಂದ್ರದ ಡಾ| ಕಾವ್ಯಾ ಶೆಟ್ಟಿ ವಂದಿಸಿದರು. ವಕೀಲ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.