Advertisement
ನವನಗರೋತ್ಥಾನ ಯೋಜನೆಯಡಿ 34ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಿ, ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿ, ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿಗೆ 7,300 ಕೋಟಿ ಅನುದಾನ ಒದಗಿಸಲಾಗಿದ್ದು, ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ. ನವ ನಗರೋತ್ಥಾನ, ಸಾಗರೋತ್ಥಾನ ಯೋಜನೆಯಡಿ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳ ಅಭಿ ವೃದ್ಧಿಗೆ ಸರ್ಕಾರ ಆದ್ಯತೆ ನೀಡಲಾಗುತ್ತಿದೆ ಎಂದರು.
Related Articles
Advertisement
ಎರಡು ಭಾರಿ ಮುಂದೂಡಿಕೆ: ಮೇಲ್ಸೇತುವೆಗೆ ಮೇ.28ರಂದೇ ಸಾವರ್ಕರ್ ಹೆಸರಿಡಲು ದಿನ ನಿಗದಿಪಡಿಸಲಾಗಿತ್ತು. ಇದಕ್ಕೆ ಪ್ರತಿಪಕ್ಷಗಳು, ಸಂಘಟನೆಗಳು ಅಡ್ಡಿಯುಂಟು ಮಾಡಿದ್ದವು. ಜತೆಗೆ ಗೆಜೆಟ್ ನೋಟಿಫಿಕೇಷನ್ ಘೋಷಿಸದ ಕಾರಣ ಸರ್ಕಾರ ಕಾರ್ಯಕ್ರಮ ರದ್ದುಮಾಡಿತ್ತು. ನಿಯಮದಂತೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡ ಮೇಲೆ ಹೆಸರಿಡಲು ದಾರಿ ಸುಗಮವಾಯಿತು. ಬಳಿಕ ಸೆ. 1ಕ್ಕೆ ಮಾಜಿ ರಾಷ್ಟ್ರಪತಿಪ್ರಣಬ್ ಮುಖರ್ಜಿ ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮತ್ತೂಮ್ಮೆ ಮುಂದೂಡಲಾಗಿತ್ತು. ವಿವಿಧ ರಸ್ತೆಗಳಿಗೆ ಮಾರ್ಗ: 800 ಮೀ. ಉದ್ದದ ನಾಲ್ಕು ಪಥದ ಮೇಲ್ಸೆತುವೆ ರಸ್ತೆ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಯಶವಂತಪುರ, ಜಾಲಹಳ್ಳಿ ವಿದ್ಯಾರಣ್ಯಪುರ ಕಡೆಯಿಂದ ದೊಡ್ಡಬಳ್ಳಾಪುರ ಹಾಗೂ ಏರ್‌ಪೋರ್ಟ್ ಕಡೆಯ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ.