Advertisement

ಅಧ್ಯಾತ್ಮಿಕ ಸೇವಾ ಕೇಂದ್ರ ಉದ್ಘಾಟನೆ

03:33 PM Nov 03, 2020 | Suhan S |

ಗುಂಡ್ಲುಪೇಟೆ: ಅಧ್ಯಾತ್ಮಿಕ ಮಾರ್ಗದಲ್ಲಿ ಸಾಗಿದರೆ ಮಾತ್ರ ಮನುಷ್ಯ ಅಂತಿಮ ಗುರಿ ತಲುಪಲು ಸಾಧ್ಯ ಎಂದು ರಾಜಯೋಗಿನಿ ಬಿ.ಕೆ.ಲಕ್ಷ್ಮೀ ಹೇಳಿದರು.

Advertisement

ಪಟ್ಟಣದ ಶ್ವೇತಾದ್ರಿಗಿರಿ ಬಡಾವಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ನಿರ್ಮಿಸಿದ ಅಧ್ಯಾತ್ಮಿಕ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಮನುಷ್ಯರಾಗಿ ಹುಟ್ಟಿದ ಮೇಲೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಾರ್ಥಕ ಜೀವನ ನಡೆಸಬೇಕು. ಸ್ನೇಹ, ವಿಶ್ವಾಸ, ಸತ್ಯ,ನಂಬಿಕೆ ಹಾಗೂ ಪ್ರಾಮಾಣಿಕತೆಯಂತಹ ಸರ್ವಕಾಲಿಕ ಮೌಲ್ಯಗಳನ್ನು ಅನುಸರಿಸ ಬೇಕು ಎಂದರು.

ಕಾರ್ಯಕ್ರಮದಲ್ಲಿ ಗೋಪಾಲಪುರ ಕಬ್ಬಿಣಕೋಲೇಶ್ವರ ಮಠಾಧ್ಯಕ್ಷರಾದ ಇಮ್ಮಡಿ ಗುರುಮಲ್ಲಸ್ವಾಮೀಜಿ, ತಹಶೀ ಲ್ದಾರ್‌ ಎಂ.ನಂಜುಂಡಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯ್ಕ, ಅಧ್ಯಾತ್ಮಿಕ ಸೇವಾ ಕೇಂದ್ರದ ಮುಖ್ಯ ಸಂಚಾಲಕಿ ಜಿ.ಕೆ.ವೀಣಾ, ಮಂಡ್ಯ ಜಿಲ್ಲೆಸಂಚಾಲಕಿ ಶಾರದಾ, ಪ್ರಭಾಮಣಿ, ದಾನೇಶ್ವರಿ, ವೀಣಾ, ಸರೋಜಾ, ಬಿ.ಕೆ. ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆ: ನಾಗೇಂದ್ರ :

ಹನೂರು: ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಮಹತ್ತರ ಸ್ಥಾನ ಪಡೆದಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಉಪ ತಹಶೀಲ್ದಾರ್‌ ನಾಗೇಂದ್ರ ತಿಳಿಸಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ಅತ್ಯಂತ ಶ್ರೇಷ್ಠ ಭಾಷೆಯಾಗಿದೆ. ಸಾಹಿತ್ಯ, ಸಂಪ್ರದಾಯ, ಸಂಸ್ಕೃತಿಯಲ್ಲಿ ತನ್ನದೇ ಆದ ಹಿರಿಮೆ ಹೊಂದಿದೆ. ಭಾಷೆ, ನಾಡು ನುಡಿ ಮತ್ತು ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಒತ್ತು ನೀಡಬೇಕು ಎಂದರು. ಈ ವೇಳೆ ಶಿರಸ್ತೇದಾರ್‌ ಸುರೇಶ್‌, ರಾಜಸ್ವ ನಿರೀಕ್ಷಕ ಬಿ.ಪಿ. ಮಾದೇಶ್‌, ಗ್ರಾಮ ಲೆಕ್ಕಿಗ ಶೇಷಣ್ಣ, ಸಿದ್ದರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next