Advertisement
ತೋಟಗಾರಿಕಾ ಇಲಾಖೆ ಹಾಗೂ ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಭಾ ಭವನದಲ್ಲಿ ಬುಧವಾರ ನಡೆದ ವೈಜ್ಞಾನಿಕ ಜೇನು ಕೃಷಿ ಮಾಹಿತಿ ಶಿಬಿರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಕಿ ಹಾಕಿ ನೊಣಗಳನ್ನು ಓಡಿಸಿ ಕ್ರೌರ್ಯದಿಂದ ಜೇನು ತೆಗೆಯುವುದು ಕಂಡುಬರುತ್ತದೆ. ಅದು ಸಲ್ಲದು. ಈ ಬಗ್ಗೆ ಜಾಗೃತಿಯ ಜತೆಗೆ ಕೃಷಿ ಬಗ್ಗೆಯೂ ಆಸಕ್ತಿ ಮೂಡಿಸಬೇಕು. ಶಿಬಿರದಲ್ಲಿ ತರಬೇತಿ ಪಡೆದವರು ಇತರರಿಗೆ ಇದರ ಮಹತ್ವ ತಿಳಿಸಿ, ಗ್ರಾಮದಲ್ಲಿ ಕನಿಷ್ಠ 10 ಮಂದಿ ಕೃಷಿಯಲ್ಲಿ
ತೊಡಗಿಸಿಕೊಳ್ಳುವಂತಾಗಬೇಕು ಎಂದರು.
Related Articles
ದ.ಕ. ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮಾತನಾಡಿ, ಸರಕಾರದ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಹಸಿರು ಕ್ರಾಂತಿ ಮಾದರಿಯಲ್ಲಿ ಜೇನು ಕೃಷಿಯ ಮೂಲಕ ಸಿಹಿ ಕ್ರಾಂತಿಯನ್ನು ಪ್ರಾರಂಭಿಸಬೇಕು ಎಂದರು.ರೈತರು ಬೆಳೆದ ಜೇನಿಗೆ ಸಹಕಾರ ಸಂಘದ ಮೂಲಕ ಉತ್ತಮ ಮಾರುಕಟ್ಟೆ ನೀಡುತ್ತಿದ್ದು, ರೈತರು ಕೃಷಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು.
Advertisement
ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗೌರಿ ಬನ್ನೂರು ಮಾತನಾಡಿ, ಜೇನು ಪ್ರಕೃತಿ ದತ್ತವಾದ ಕೊಡುಗೆ. ಇದು ಆಯುರ್ವೇದ ದಿವ್ಯ ಔಷಧಿಯಾಗಿದೆ. ಉತ್ತಮ ತರಬೇತಿ ಪಡೆದುಕೊಂಡು ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಅಧಿಕ ಲಾಭ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ದ.ಕ. ಜೇನು ವ್ಯವಸಾಯಗಾರರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಕಣಜಾಲು ಉಪಸ್ಥಿತರಿದ್ದರು.
ಪವಿತ್ರಾ ಪ್ರಾರ್ಥಿಸಿದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ಇಲಾಖೆಯ ಹೊಳೆ ಬಸಪ್ಪ, ಜೇನು ವ್ಯವಸಾಯಗಾರರ ಸಹಕಾರ ಸಂಘದ ನಿರ್ದೇಶಕರಾದ ಇಂದಿರಾ, ಶಿವಾನಂದ, ಪಾಂಡುರಂಗ ಹೆಗ್ಡೆ, ಕೃಷಿಕ ವಿಜಯ ಕುಮಾರ್ ರೈ ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ವೀರಪ್ಪ ಗೌಡ ವಂದಿಸಿ, ರಾಧಾಕೃಷ್ಣ ಕೋಡಿ ನಿರೂಪಿಸಿದರು.
ಕೃಷಿ ಪರಂಪರೆ ಉಳಿಯಲಿಶಿಬಿರ ಉದ್ಘಾಟಿಸಿದ ಜೇನು ವ್ಯವಸಾಯಗಾರರ ಸಹಕಾರ ಸಂಘದ ‘ಮಧು ಪ್ರಪಂಚ’ ಮಾಸಿಕ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಮಕ್ಕಳಿಗೆ ಅಕ್ಷರ ಪ್ರೀತಿಯ ಜತೆಗೆ, ಮಣ್ಣಿನ ಪ್ರೀತಿಯನ್ನು ನೀಡುವ ಕೃಷಿ ಪರಂಪರೆಯ ಉಳಿವಿಗೆ ಕಾರಣವಾಗಬೇಕು ಎಂದರು.