ಮುಂಬಯಿ: ನಗರದ ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲೊಂದಾದ ಬೋಂಬೆ ಬಂಟ್ಸ್ ಅಸೋಸಿಯೇಶನ್ ಇದರ ಬಂಟ್ಸ್ ಸೆಂಟರ್, ಬಂಟ್ಸ್ ಸೆಂಟರ್ ಮಾರ್ಗ, ಸೆಕ್ಟರ್-24, 3ನೇ ಮಹಡಿ, ಪ್ಲಾಟ್ ನಂಬರ್ 6-ಜಿ ಇಲ್ಲಿ ಪುನರ್ ನಿರ್ಮಾಣಗೊಂಡ ಬಂಟ್ಸ್ ಸೆಂಟರ್ ಕಟ್ಟಡದ ಉದ್ಘಾಟನಾ ಸಮಾರಂಭವು ಜು. 7ರಂದು ಅಪರಾಹ್ನ 2ರಿಂದ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ ಹಾಗೂ ಇನ್ನಿತರ ವೈಧಿಕ ವಿಧಿ-ವಿಧಾನಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಿರು ಸಭಾಂಗಣವನ್ನು ಗಣ್ಯರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹೊಟೇಲ್ ಅವೆನ್ಯೂ ಕಾಂದಿವಲಿ ಸಿಎಂಡಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ವಿಶ್ವಸ್ಥ ರಘುರಾಮ ಕೆ. ಶೆಟ್ಟಿ, ಶಿವಾನಿ ಮದರ್ ಆ್ಯಂಡ್ ಚೈಲ್ಡ್ ಕೇರ್ ಹಾಸ್ಪಿಟಲ್ ಮುಲುಂಡ್ ಇದರ ಸಿಎಂಡಿ ಡಾ| ಸತ್ಯಪ್ರಕಾಶ್ ಶೆಟ್ಟಿ, ಸೋನಿ ಸ್ಟೀಲ್ ಆ್ಯಂಡ್ ಎಪ್ಲೈಯನ್ಸಸ್ ಪ್ರೈವೇಟ್ ಲಿಮಿಟೆಡ್ ಗೋರೆಗಾಂವ್ ಇದರ ಸಿಎಂಡಿ ಪಾಂಡುರಂಗ ಶೆಟ್ಟಿ, ಬಂಟರ ಸಂಘ ಮುಂಬಯಿ ಪೊವಾಯಿ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ನ್ಯಾಯವಾದಿ ಪ್ರದೀಪ್ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರುಗಳಾದ ಶ್ಯಾಮ್ ಎನ್. ಶೆಟ್ಟಿ, ಹೆಜಮಾಡಿ ದಿ| ವಿಠuಲ ಶೆಟ್ಟಿ, ಸರ್ವೋತ್ತಮ ಎಚ್. ಶೆಟ್ಟಿ, ದಿ| ಬಾಬು ಎನ್. ಶೆಟ್ಟಿ, ದಿ| ಹಿರಿಯಣ್ಣ ವೈ. ಶೆಟ್ಟಿ, ತೋಕೂರುಗುತ್ತು ಭಾಸ್ಕರ ವೈ. ಶೆಟ್ಟಿ, ತೋಕೂರುಗುತ್ತು ಭಾಸ್ಕರ್ ಶೆಟ್ಟಿ, ಎನ್. ಸಿ. ಶೆಟ್ಟಿ, ಜಯರಾಮ ಎಸ್. ಮಲ್ಲಿ, ನ್ಯಾಯವಾದಿ ಕೆ. ಪಿ. ಪ್ರಕಾಶ್ ಎಲ್. ಶೆಟ್ಟಿ, ನ್ಯಾಯವಾದಿ ದಿ| ಆನಂದ ವಿ. ಶೆಟ್ಟಿ, ಮಧ್ಯಗುತ್ತು ಜಯ ಎನ್. ಶೆಟ್ಟಿ, ಜಯ ಕೆ. ಶೆಟ್ಟಿ, ನ್ಯಾಯವಾದಿ ಅಶೋಕ್ ಡಿ. ಶೆಟ್ಟಿ, ಜಯಂತ್ ಕೆ. ಶೆಟ್ಟಿ, ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ, ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ ಇವರ ಭಾವಚಿತ್ರಗಳನ್ನು ಗಣ್ಯರು ಅನಾವರಣಗೊಳಿಸಿದರು.
ಬೆಳಗ್ಗೆ 8.30ರಿಂದ ಗಣಹೋಮದೊಂದಿಗೆ ಕಾರ್ಯಕ್ರಮವು ಆರಂಭಗೊಂಡು ಪೂರ್ವಾಹ್ನ 10.30 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಅನಂತರ ಅನ್ನ ಪ್ರಸಾದ ಕಾರ್ಯಕ್ರಮವು ಜರಗಿತು. ಅಪರಾಹ್ನ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂಗವಾಗಿ ಊರಿನ ನುರಿತ ಕಲಾವಿದರಿಂದ ಹಾಗೂ ಅಸೋಸಿಯೇಶನ್‌ನ ಸದಸ್ಯರಿಂದ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನೆರವೇರಿತು.
ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಎಸ್. ಶೆಟ್ಟಿ,. ಜತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ್ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಮಸುಂದರ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಚರಣ್ ಆರ್. ಶೆಟ್ಟಿ ಅವರು ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಿತು. ಸಮಾಜ ಬಾಂಧವರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಶ್ ಶಿರಿಯಾ