ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಅತ್ತಿಗುಪ್ಪೆ ಗ್ರಾಮದಲ್ಲಿ ನೂತನ ಪಡಿತರ ಉಪಕೇಂದ್ರವನ್ನು ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಇಲ್ಲಿನ ಗ್ರಾಮಸ್ಥರು ೩ ಕಿ.ಮೀ.ದೂರದ ಚಿಲ್ಕುಂದಕ್ಕೆ ತೆರಳಿ ಪಡಿತರ ಪಡೆಯಬೇಕಿತ್ತು. ಈ ಗ್ರಾಮದ ಗ್ರಾಮಸ್ಥರ ಬಹುದಿನಗಳಿಂದ ಉಪ ಕೇಂದ್ರ ತೆರೆಯಲು ಬೇಡಿಕೆ ಇಟ್ಟಿದ್ದರು. ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳಿಗೆ ನೀಡಿದ್ದ ಸೂಚನೆಯಂತೆ ಪಡಿತರ ಉಪ ಕೇಂದ್ರ ಆರಂಭಿಸಲಾಗುತ್ತಿದೆ. ಸಕಾಲಕ್ಕೆ ಆಗಮಿಸಿ ಪಡಿತರ ವಿತರಿಸಬೇಕೆಂದು ನ್ಯಾಯಬೆಲೆ ಅಂಗಡಿ ಮಾಲಿಕ ಮಹೇಂದ್ರಕುಮಾರ್‌ರಿಗೆ ಸೂಚಿಸಿದರು.
ಡೇರಿ ಕಟ್ಟಡಕ್ಕೆ ಶಂಕು ಸ್ಥಾಪನೆ:
ಇದೇ ವೇಳೆ ಅತ್ತಿಗುಪ್ಪೆಯ 13 ಲಕ್ಷರೂ ವೆಚ್ಚದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿ. ಹಾಲು ಉತ್ಪಾದಕರ ಸಂಘದಲ್ಲಿ ರಾಜಕೀಯ ಬೆರೆಸಿದಂತೆ ಸಂಘವನ್ನು ಉತ್ತಮವಾಗಿ ಮುನ್ನಡೆಯಬೇಕೆಂದು ಸಂಘದ ಆಡಳಿತ ಮಂಡಳಿಗೆ ಕಿವಿಮಾತು ಹೇಳಿ. ಗ್ರಾಮದಲ್ಲಿ ಇನ್ನು ಹಲವಾರು ಕಾಮಗಾರಿಗಳ ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಲ್ಕುಂದ ಗ್ರಾಪಂ ಉಪಾಧ್ಯಕ್ಷ ಜಯಣ್ಣ, ಸದಸ್ಯರಾದ ಸಿದ್ದೇಶ್, ವಸಂತಕುಮಾರಿ, ಶಿವಕುಮಾರ್, ರೆಹಮಾನ್, ತಾಪಂ ಮಾಜಿ ಉಪಾಧ್ಯಕ್ಷ ಮಹೇಂದ್ರಕುಮಾರ್, ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವೀಣಾ, ದಸಂಸ ಸಂಚಾಲಕರಾದ ಅತ್ತಿಕುಪ್ಪೆ ರಾಮಕೃಷ್ಣ, ಸಿದ್ದೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಜರಿದ್ದರು.