Advertisement

Surat : ಇಂದು ಸೂರತ್‌ ಏರ್‌ಪೋರ್ಟ್‌ ಉದ್ಘಾಟನೆ

12:16 AM Dec 17, 2023 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟ ವಿಮಾನ ನಿಲ್ದಾಣ ಎಂದು ಮಾನ್ಯತೆ ಪಡೆದಿರುವ ಗುಜರಾತ್‌ನ ಸೂರತ್‌ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ‌ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಅವರು ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ.

Advertisement

ಜತೆಗೆ ಹೊಸ ವಿನ್ಯಾಸದ ಫೋಟೋಗಳನ್ನೂ ಅಪ್‌ಲೋಡ್‌ ಮಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಅಧ್ಯ ಕ್ಷತೆಯ ಕೇಂದ್ರ ಸಂಪುಟ ಸೂರತ್‌ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಇದರ ಜತೆಗೆ ಸೂರತ್‌ನಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಅತೀ ದೊಡ್ಡ ಕಾರ್ಪೊರೇಟ್‌ ಆಫೀಸ್‌ ಅನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. 35.4 ಎಕ್ರೆ ಪ್ರದೇಶದಲ್ಲಿ ಅದನ್ನು ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next