ಉಡುಪಿ: ಆಹಾರ ಸರಪಳಿ, ಪರಾಗ ಸ್ಪರ್ಶ ಸೇರಿದಂತೆ ಪರಿಸರ ಸಮತೋಲನದಲ್ಲಿ ಚಿಟ್ಟೆಗಳ ಪಾತ್ರ ಅತ್ಯಂತ ಮಹತ್ವದ್ದು. ಚಿಟ್ಟೆಗಳು ಆರೋಗ್ಯಪೂರ್ಣ ಪರಿಸರದ ಸಂಕೇತ. ಅವುಗಳು ಹೆಚ್ಚಾಗಿ ಕಾಣಿಸುವ ಪ್ರದೇಶ ಮಾಲಿನ್ಯ ರಹಿತವಾಗಿರುತ್ತದೆ ಎಂದು ಶಿವಮೊಗ್ಗ ಕೃಷಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಎಂ.ಕೆ. ನಾಯ್ಕ ಹೇಳಿದರು.
ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಪ್ರಾಣಿಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಆಶ್ರಯ ದಲ್ಲಿ ಮಂಗಳವಾರ ಜರಗಿದ ಕಾಲೇಜಿ ನ ಸವಿತಾ ಶಾಸ್ತ್ರೀ ಚಿಟ್ಟೆ ಪಾರ್ಕ್ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮನೆಗಳಲ್ಲಿರುವ ಕಡಿಮೆ ಜಾಗದಲ್ಲಿಯೂ ಚಿಟ್ಟೆ ಪಾರ್ಕ್ ನಿರ್ಮಿಸಿ ಆರೋಗ್ಯಕರ ಪರಿಸರ ವ್ಯವಸ್ಥೆ ರೂಪಿಸಬೇಕು ಎಂದರು.
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ ಮಾತನಾಡಿ, ದಿ| ಸವಿತಾ ಶಾಸ್ತ್ರಿ ಅವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಚಿಟ್ಟೆಪಾರ್ಕ್ ರೂಪು ಗೊಂಡಿರುವುದು ಅರ್ಥಪೂರ್ಣ ಸಾಮಾಜಿಕ ಕೊಡುಗೆಯಾಗಿದೆ ಎಂದರು. ಸವಿತಾ ಅವರು ಬಹುಮುಖೀ ಪ್ರತಿಭೆಯುಳ್ಳವರಾಗಿದ್ದರು. ಸಂದಿಗ್ಧ ಸ್ಥಿತಿಗಳ ನಡುವೆಯೂ ಗುಣಾತ್ಮಕವಾಗಿ ಬದುಕಿ ಸಮಾಜದ ಒಳಿತಿಗೆ ಸಮರ್ಪಿ ಸಿಕೊಂಡ ವ್ಯಕ್ತಿತ್ವ ಎಂದು ಸ್ಮರಿಸಿದರು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ರಾದ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಇಸಾ ಟೆಕ್ನಾಲಜಿ ಪ್ರೈ. ಲಿ. ನಿರ್ದೇಶಕ ಡಾ| ಪ್ರಭಾಕರ್ ಶಾಸ್ತ್ರಿ, ಎಂಜಿಎಂ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ, ಎಂಜಿಎಂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ಬೆಳ್ವಾಯಿ ಚಿಟ್ಟೆಪಾರ್ಕ್ ನ ಸಮ್ಮಿಲನ್ ಶೆಟ್ಟಿ, ಒಕ್ಲಹೊಮ ಮೆಡಿಕಲ್ ರಿಸರ್ಚ್ ಫೌಂಡೇಶನ್‌ನ ಸಹಾಯಕ ಪ್ರಾಧ್ಯಾಪಕಿ ಡಾ| ಹರಿಣಿ ಭಗವಂತ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್‌ನ ಟ್ರಸ್ಟಿ ತೇಜಸ್ವಿ ಆಚಾರ್ಯ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀ ನಾರಾಯಣ ಕಾರಂತ ಸ್ವಾಗತಿಸಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಮನಿತಾ ಟಿ.ಕೆ. ವಂದಿಸಿದರು. ಉಪನ್ಯಾಸಕಿ ಯಶಸ್ವಿನಿ ನಿರೂಪಿಸಿದರು.
ಕಳೆನಾಶಕದಿಂದ ಚಿಟ್ಟೆ ಸಂತತಿಗೆ ತೊಂದರೆ
ತೋಟಗಾರಿಕೆ, ಕೃಷಿ ಬೆಳೆಗಳಿಗೆ ಕಳೆ/ಕೀಟನಾಶಕ ಸಿಂಪಡಣೆ ಹೆಚ್ಚಳದಿಂದ ಚಿಟ್ಟೆಗಳ ಸಂತತಿಗೆ ತೊಂದರೆಯಾಗುತ್ತಿದೆ ಎಂದು ಡಾ| ಎಂ.ಕೆ. ನಾಯ್ಕ ಕಳವಳ ವ್ಯಕ್ತಪಡಿಸಿದರು. ಚಿಟ್ಟೆಗಳು ಪರಿಸರ ಸೂಚಕವಾಗಿದ್ದು, ಜಾಗತಿಕ ತಾಪಮಾನ, ಮಳೆ ಕೊರತೆ, ಪ್ರಾಕೃತಿಕ ಅವಘಡಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತವೆ. ಬದುಕುವ ಸ್ವಲ್ಪ ದಿನವಾದರೂ ಹಸುರು ಪರಿಸರದಲ್ಲಿ ತನ್ನ ಪಾತ್ರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತವೆ ಎಂದರು.
ಚಿಟ್ಟೆ ಪಾರ್ಕನ್ ವೈಶಿಷ್ಟ್ಯ
ಕಾಲೇಜು ಕ್ಯಾಂಪಸ್‌ನ 15 ಸೆಂಟ್ಸ್ ಜಾಗದಲ್ಲಿ ಚಿಟ್ಟೆಪಾರ್ಕ್ ರೂಪಿಸಲಾಗಿದ್ದು, ಚಿಟ್ಟೆಗಳನ್ನು ಆಕರ್ಷಿಸು ವ ಪ್ರಮುಖ ಸಸ್ಯಗಳನ್ನು ನೆಡಲಾಗಿದೆ. 21 ವಿವಿಧ ಪ್ರಭೇದಗಳ ಸಸ್ಯಗಳು ಇಲ್ಲಿವೆ. ಕಾಮನ್ ಮರ್ಮಾನ್, ವಾಟರ್ ಸ್ನೋ ಫ್ಲಾಟ್, ಕಾಮನ್ ಕ್ರೊ, ಗ್ರೇ ಫ್ಯಾನ್ಸಿ, ಬ್ಲೂ ಟೈಗರ್, ಕಾಮನ್ ಎಮಿಗ್ರೆಂಟ್ ಸಹಿತ ಈಗಾಗಲೇ ಇಲ್ಲಿ 32 ವಿವಿಧ ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದೆ.