ವಿಟ್ಲ: ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿದ ಸಹಕಾರ ಸಂಘಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಮುಂಚೂಣಿಯಲ್ಲಿದೆ. ಉತ್ತಮ ಕಾರ್ಯನಿರ್ಹಣೆಯಿಂದ ಶಾಖೆಗಳ ಸಂಖ್ಯೆ ದುಪ್ಪಟ್ಟಾಗಲಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ ರೈ ಹೇಳಿದರು.
ಅವರು ರವಿವಾರ ಪುಣಚ ಪರಿಯಾಲ್ತಡ್ಕದ ಪ್ರಗತಿ ಕಾಂಪ್ಲೆಕ್ಸ್‌ನಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 13ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆರಂಭದಿಂದಲೂ ಪ್ರಗತಿಯನ್ನು ಗಮನಿಸಿದ್ದೇನೆ. ಉತ್ತಮವಾಗಿ ವ್ಯವಹಾರ ನಡೆಸಿ ಈ ಶಾಖೆ ಕೂಡ ಯಶಸ್ಸು ಸಾಧಿಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎಲ್ಲ ಶಾಖೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 13ನೇ ಈ ಶಾಖೆ ಕೂಡ ಉತ್ತುಂಗಕ್ಕೇರಲಿದೆ ಎಂದರು.
ಪರಿಯಾಲ್ತಡ್ಕ ಮಸೀದಿ ಅಧ್ಯಕ್ಷ ಎಂ.ಎಸ್.ಮಹಮ್ಮದ್, ಪುಣಚ ಗ್ರಾ.ಪಂ. ಅಧ್ಯಕ್ಷೆ ಬೇಬಿ, ಪುಣಚ ಮಹಿಷ ಮರ್ದಿನಿ ದೇವಸ್ಥಾನದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಡಾ| ಕೆ.ಬಿ. ರಾಜಾರಾಮ, ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಪುಣಚ ಕ್ರಿಸ್ತರಾಜ ಚರ್ಚ್‌ನ ಧರ್ಮಗುರು ವಂ| ನೆಲ್ಸನ್ ಒಲಿವೆರಾ, ಪುಣಚ ಪ್ರಗತಿ ಕಾಂಪ್ಲೆಕ್ಸ್ ಮಾಲಕ ಎಚ್. ನಾರಾಯಣ ಪೂಜಾರಿ, ಪುಣಚ ಬಿಲ್ಲವ ಸಂಘದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ವಿಟ್ಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಶುಭಹಾರೈಸಿದರು.
ಸದಸ್ಯರಿಗೆ ಠೇವಣಿಪತ್ರಗಳನ್ನು ವಿತರಿಸಲಾಯಿತು. ಕಟ್ಟಡದ ಮಾಲಕರನ್ನು ಮತ್ತು ಅತಿಥಿಗಳನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ರಮೇಶ ಅನ್ನಪ್ಪಾಡಿ, ಅಶೋಕ್ ಪೂಜಾರಿ ಕೋವಾಲಿ, ವಿಟ್ಟಲ ಬೆಳ್ಚಡ ಚೇಳೂರು, ಗಿರೀಶ್ ಪೆರ್ವ, ಜಯಶಂಕರ ಕಾನ್ಸಾಲೆ, ಸುಜಾತಾ, ವಾಣಿವಸಂತ, ಅರುಣ ಕುಮಾರ್, ಆಶಿತ್ ಪೂಜಾರಿ, ಶಾಖಾ ವ್ಯವಸ್ಥಾಪಕಿ ನಿಶ್ಚಿತಾ ಉಪಸ್ಥಿತರಿದ್ದರು.
ಸಿಇಒ ಮಮತಾ ಸ್ವಾಗತಿಸಿದರು. ರಮೇಶ ಅನ್ನಪಾಡಿ ಪ್ರಸ್ತಾವನೆಗೈದರು. ವಿಜಯಾ ವಂದಿಸಿದರು. ಅಶ್ವಿನಿ ಮತ್ತು ಗಿರೀಶ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.