Advertisement

ಜಾತಿಗಿಂತ ನೀತಿ, ಸಾಧನೆ ಮೇಲ್ಪಂಕ್ತಿಯಾಗಲಿ:ಅಂಗಾರ

01:07 AM Oct 21, 2021 | Team Udayavani |

ಮಂಗಳೂರು: ಜಾತಿಗಿಂತ ನೀತಿ, ಸಾಧನೆ ಮೇಲ್ಪಂಕ್ತಿಯಾದಾಗ ಉನ್ನತಸ್ಥಾನಮಾನ ದೊರೆಯುತ್ತದೆ. ಇದಕ್ಕೆ ಮಹರ್ಷಿ ವಾಲ್ಮೀಕಿಯವರೇ ಉದಾಹರಣೆಯಾಗಿದ್ದಾರೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದ್ದಾರೆ.

Advertisement

ಬುಧವಾರ ಜಿ.ಪಂ. ಸಭಾಂಗಣದಲ್ಲಿ ಜರಗಿದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ಮಹರ್ಷಿಯವರು ರಾಮಾಯಣ ಬರೆಯುವ ಮೂಲಕ ಮಹಾಕವಿಯಾದ ದಾರ್ಶನಿಕರು. ಅವರು ಜಾತಿಯಿಂದ ಗುರುತಿಸಲ್ಪಟ್ಟಿಲ್ಲ. ಬದಲಾಗಿ ನೀತಿಯಿಂದ, ಕಾವ್ಯ ಸಾಧನೆ ಯಿಂದ ಜಗತ್ತಿನಲ್ಲಿ ಗುರುತಿಸಲ್ಪಟ್ಟರು ಎಂದರು.

ಸಾಧನೆಯ ಛಲವಿರಲಿ
ಪ.ಜಾತಿ, ಪಂಗಡ ಸಹಿತ ಎಲ್ಲ ವರ್ಗದ ವಿದ್ಯಾರ್ಥಿಗಳು ಕೂಡ ಉತ್ತಮ ಅಂಕಗಳನ್ನು ಪಡೆಯಬೇಕು. ಇದಕ್ಕೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಸಾಧನೆಯ ಛಲ ವಿದ್ಯಾರ್ಥಿಗಳಲ್ಲಿರಬೇಕು. ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ಧಿಗಾಗಿ ಸರಕಾರ ಪ್ರತ್ಯೇಕ ನಿಗಮವನ್ನು ರಚಿಸಿದೆ. ಸರಕಾರದ ಸೌಲಭ್ಯ ಎಲ್ಲ ವರ್ಗಗಳು ಅಭಿವೃದ್ಧಿಯಾಗಬೇಕು ಎಂದರು.

ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸಚಿವರು ಸಮ್ಮಾನಿಸಿದರು. ವಿವಿಧ ಯೋಜನೆಗಳಡಿ ವಾಹನ ಪರವಾನಿಗೆ ಪತ್ರವನ್ನು ಜಿಲ್ಲಾಧಿಕಾರಿ ವಿತರಿಸಿದರು.

Advertisement

ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಜಿ.ಪಂ. ಉಪಕಾರ್ಯದರ್ಶಿ ಆನಂದ ಕುಮಾರ್‌, ಸಮಗ್ರ ಗಿರಿಜನ ಯೋಜನೆಯ ಸಮನ್ವಯಾಧಿಕಾರಿ ಡಾ| ಹೇಮಲತಾ, ವಾಲ್ಮೀಕಿ ಸಮುದಾಯದಮುಖಂಡರು ಪಾಲ್ಗೊಂಡಿದ್ದರು.

ಜಿಲ್ಲಾಡಳಿತ, ಜಿ.ಪಂ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಾರ್ಯ ಕ್ರಮ ಆಯೋಜಿಸಲಾಗಿತ್ತು.

ಗ್ರಂಥಗಳು ಧರ್ಮಕ್ಕೆ ಸೀಮಿತವಾಗದಿರಲಿ
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ವ್ಯಕ್ತಿ ತನ್ನ ಯೋಚನೆಗಳನ್ನು ಬದಲಾಯಿಸಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಮಹಾನ್‌ ಸಾಧಕನಾಗಿ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರ ಜೀವನಚರಿತ್ರೆ ಉದಾಹರಣೆ. ಮಹಾಭಾರತ, ರಾಮಾಯಣಗಳನ್ನು ಕೇವಲ ಧಾರ್ಮಿಕ ಗ್ರಂಥಗಳಾಗಿ ನೋಡಬಾರದು. ಅದು ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ಪೂರ್ವಗ್ರಹಕ್ಕೊಳಗಾಗದೆ ಗ್ರಂಥಗಳನ್ನು ಶ್ರದ್ಧೆಯಿಂದ ಓದಿ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next