ಉಡುಪಿ: ಎಲೆಕ್ಟ್ರಿಕ್ ವಾಹನಗಳ ಖರೀದಿಯಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಲಿದೆ ಇದರಿಂದ ಪರಿಸರ ಸಂರಕ್ಷಣೆಯಲ್ಲಿಯೂ ಭಾಗಿಯಾಗುವಂತಾಗುತ್ತದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ರವಿವಾರ ಗುಂಡಿಬೈಲು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಒಕಾಯ ಎಲೆಕ್ಟ್ರಿಕ್ ವಾಹನಗಳ ಅಧಿಕೃತ ಮಾರಾಟ ಸಂಸ್ಥೆ ‘ಲಕ್ಷ್ ಇವಿ ಮೋಟಾರ್ಸ್’ ನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜನರು ಹೆಚ್ಚು ಎಲೆಕ್ಟ್ರಿಕ್ ವಾಹನ ಖರೀದಿಗೆ ಒಲವು ತೋರಿಸಬೇಕು. ಪವರ್ ಸೆಕ್ಟರ್ ನಲ್ಲಿ ಭಾರತ ಸಾಕಷ್ಟು ಬದಲಾವಣೆಗೆ ತೆರೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಸಾಕಷ್ಟು ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಮಣಿಪಾಲದಲ್ಲಿ ಎಲ್ಲ ರಿಕ್ಷಾಗಳನ್ನು ಎಲಕ್ಟ್ರಿಕ್ ರಿಕ್ಷಾವಾಗಿ ಪರಿವರ್ತಿಸುವ ಯೋಜನೆ ರೂಪಿಸಿದ್ದೇವೆ. ಇದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಉಡುಪಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹೆಚ್ಚು ಕಡೆಗಳಲ್ಲಿ ಚಾರ್ಜಿಂಗ್ ಸೆಂಟರ್ ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು. ಲಕ್ಷ್ ಇವಿ ಮೋಟಾರ್ಸ್ ಸಂಸ್ಥೆ ಉತ್ತಮ ಸೇವೆ ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಮಾರಾಟ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಮೂವರು ಗ್ರಾಹಕರಾದ ಉಷಾ ಎಸ್. ಶೆಟ್ಟಿ, ಸಂತೋಷ್ ಕುಮಾರ್, ದಿನೇಶ್ ಎ. ಶೆಟ್ಟಿ ಅವರು ಖರೀದಿಸಿದ ಒಕಾಯ ಸ್ಕೂಟರ್‌ನ್ನು ಶಾಸಕ ಭಟ್ ಹಸ್ತಾಂತರಿಸಿದರು. ನಗರಸಭೆ ಸದಸ್ಯ ಪ್ರಭಾಕರ್ ಪೂಜಾರಿ, ಪ್ರಮುಖರಾದ ರಾಮ್‌ದಾಸ್ ಶೆಟ್ಟಿ, ಮುರಳೀಧರ್ ಕಡೇಕಾರ್, ರಾಮಚಂದ್ರ ಭಟ್, ಪ್ರವೀಣ್ ಪೂಜಾರಿ, ಭಾಸ್ಕರ್ ಪಾಲನ್, ರಾಜೇಶ್ ಸೆರಾವೊ, ಯು. ಗೋಪಾಲಕೃಷ್ಣ ಉಪಧ್ಯಾಯ, ಪ್ರಕಾಶ್ ಶೆಟ್ಟಿ, ನಿತಿನ್ ಕುಮಾರ್ ಭಾಗವಹಿಸಿದ್ದರು. ಸಂಸ್ಥೆಯ ಮಾಲಕರಾದ ಲೋಕೇಶ್ ಪಾಲನ್, ವಿಜೇತಾ, ಲಕ್ಷ್, ವಿಹಾ ಮತ್ತು ಕುಟುಂಬಸ್ಥರಾದ ನಾರಾಯಣ ಪೂಜಾರಿ, ಪದ್ಮ, ಜಗದೀಶ್, ಮಲ್ಲಿಕಾ, ಶಾಲಿನಿ, ಸುರೇಶ್ ಉಪಸ್ಥಿತರಿದ್ದರು.
ಎಲೆಕ್ಟ್ರಿಕ್ ವಾಹನವು ಶೇ. 97ಕ್ಕೂ ಅಧಿಕ ಬ್ಯಾಟರಿ ಬಾಳಿಕೆ ಬರಲಿದ್ದು, 3 ವರ್ಷಗಳ ವಾರಂಟಿ ಹೊಂದಿದೆ. 70 ಕಿ.ಮೀ. ವೇಗವಾಗಿ ಚಲಾಯಿಸಬಹುದಾದ ಈ ವಾಹನಗಳಲ್ಲಿ ಎಲ್‌ಇಡಿ ಲೈಟ್‌ಸ್ ವಿದ್ ಡಿಆರ್‌ಎಲ್, ಕಾಂಬಿ ಬ್ರೇಕಿಂಗ್ ಸಿಸ್ಟಮ್, ಪೋರ್ಟೆಬಲ್ ಬ್ಯಾಟರಿ, ಬಿಎಲ್‌ಡಿಸಿ ಹಬ್ ಮೋಟಾರ್, ಆಕರ್ಷಕ 10 ಬಣ್ಣಗಳಲ್ಲಿ ಲಭ್ಯವಿವೆ. ಭಾರತದ ಹೆಚ್ಚು ಬೇಡಿಕೆಯ ಒಕಾಯ ಫಾಸ್‌ಟ್ ಎಫ್4 ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 140ರಿಂದ 160 ಕಿ.ಮೀ. ಕೊಡಲಿದ್ದು, ಗಂಟೆಗೆ 60ರಿಂದ 70 ಕಿ.ಮೀ. ವೇಗವಾಗಿ ಕ್ರಮಿಸಬಹುದು. ಒಕಾಯ ಭಾರತದ ಕಂಪೆನಿಯಾಗಿದ್ದು, ಸೇಲ್‌ಸ್, ಸರ್ವಿಸ್, ಸ್ಪೇರ್ಸ್ ಈ ಮೂರು ಸೇವೆಯನ್ನು ಶೋರೂಂನಲ್ಲಿ ಒಳಗೊಂಡಿರುತ್ತದೆ. ಉಡುಪಿಯಲ್ಲಿ ಇದು 15ನೇ ಶೋರೂಂ ಆಗಿದ್ದು, 5 ಮಂದಿ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ 5 ಮಾಡೆಲ್‌ಗಳಲ್ಲಿದ್ದು, 3 ಹೈ ಸ್ಪೀಡ್, 2 ಲೋ ಸ್ಪೀಡ್ ವರ್ಗದಲ್ಲಿದೆ. ಕೇಂದ್ರ ಸರಕಾರದ ಸಬ್ಸಿಡಿ ಸೌಲಭ್ಯದೊಂದಿಗೆ 75 ಸಾವಿರದಿಂದ 1.20 ಲಕ್ಷ ರೂ., ವರೆಗೆ ವಾಹನದ ಬೆಲೆ ಇದೆ ಎಂದು ಸಂಸ್ಥೆ ಯರೀಜಿನಲ್ ಸೇಲ್ಸ್ ಮ್ಯಾನೇಜರ್ ನಿತಿನ್ ಸುಶೀಲ್ ಕುಮಾರ್ ತಿಳಿಸಿದರು.