Advertisement

ಸರ್ವ ಶ್ರೇಷ್ಠ ಕೊಂಕಣಿ ಭಾಷೆ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಲಿ: ಕೋಟ

02:49 AM Mar 21, 2021 | Team Udayavani |

ಉಡುಪಿ: ರಾಮಾಯಣ, ಮಹಾಭಾರತದಲ್ಲಿ ಕೊಂಕಣ ದೇಶದ ಉಲ್ಲೇಖವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊಂಕಣಿ ಭಾಷೆ ಹಾಸುಹೊಕ್ಕಾಗಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಮೂಲಕ ಗುರುತಿಸಲ್ಪಟ್ಟಿದೆ. ಹೀಗೆ ಕೊಂಕಣಿ ಭಾಷೆ ತನ್ನದೇ ವಿಶೇಷ ಶಕ್ತಿಯಿಂದ ಎಲ್ಲ ಕ್ಷೇತ್ರಗಳಿಗೂ ಸಾಕಷ್ಟು ಕೊಡುಗೆ ನೀಡಿ ಸರ್ವ ಶ್ರೇಷ್ಠ ಭಾಷೆಯಾ ಗಿದೆ. ಸರ್ವವ್ಯಾಪಿಯಾದ ಈ ಭಾಷೆ ಸರ್ವಸ್ಪರ್ಶಿಯಾಗಲಿ ಎಂದು ಸಚಿವ  ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.

Advertisement

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಶನಿವಾರ ನಡೆದ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡಕ್ಕೆ ಶಿಫಾರಸು :

ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಕೊಂಕಣಿ ಅಕಾಡೆಮಿಗೆ ಸರಕಾರದಿಂದ 50 ಲ.ರೂ. ಅನುದಾನ ನೀಡಲಾಗಿದೆ. ಕೊಂಕಣಿ ಅಕಾಡೆಮಿಗೆ ಮಂಗಳೂರಿನಲ್ಲಿ ಸ್ಥಳ ಮಂಜೂರುಗೊಳಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ  5 ಕೋಟಿ ರೂ. ಬಿಡುಗಡೆ ಮಾಡುವುದಕ್ಕೆ ಶಿಫಾರಸು ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಸಮ್ಮೇಳನಾಧ್ಯಕ್ಷ ಡಾ| ಕಸ್ತೂರಿ ಮೋಹನ್‌ ಪೈ ಮಾತನಾಡಿ, 1956ರಲ್ಲಿ ರಾಜ್ಯ ಪುನರ್ವಿಂಗಣೆಯಾದಾಗ ಅಲ್ಪ ಸಂಖ್ಯಾಕರ ಭಾಷೆಯಾಗಿದ್ದ ಕೊಂಕಣಿ ಬೆಳವಣಿಗೆ ಹೊಂದುತ್ತಾ 6ರಿಂದ 10ನೇತರಗತಿ ವರೆಗೆ ಪಠ್ಯವಾಯಿತು. ಮುಂದಿನ  ದಿನಗಳಲ್ಲಿ ಪಿಯುಸಿ, ಪದವಿ ತರಗತಿಗಳ ಲ್ಲಿಯೂ ಕೊಂಕಣಿ ಭಾಷಾ ಶಿಕ್ಷಣ ದೊರಕು ವಂತೆ ಮಾಡಬೇಕು ಎಂದರು.

ಮಕ್ಕಳೊಂದಿಗೆ ಮಾತನಾಡೋಣ :

Advertisement

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ್‌ ಪೈ ಮಾತನಾಡಿ, ಕೊಂಕಣಿ ಭಾಷಿಗರು ಯಾವುದೇ ದೇಶದಲ್ಲಿದ್ದರೂ ಮಾತೃ ಭಾಷೆಯನ್ನು ಮರೆಯಬಾರದು. ತಮ್ಮ ಮಕ್ಕಳೊಂದಿಗೆ ಸ್ವಲ್ಪ ಹೊತ್ತಾ ದರೂ ಮಾತೃ ಭಾಷೆಯಲ್ಲಿಯೇ ಮಾತ ನಾಡುವುದು ಒಳಿತು ಎಂದರು.

ಶಾಸಕ ಲಾಲಾಜಿ ಆರ್‌. ಮೆಂಡನ್‌, ಹಿರಿಯ ಲೇಖಕ ಎಸ್‌. ಸಂಜೀವ ಪಾಟೀಲ್, ಸಮ್ಮೇಳನ ಸಂಘಟನ ಸಮಿತಿ ಗೌರವಾಧ್ಯಕ್ಷ ಗೋಕುಲದಾಸ್‌ ನಾಯಕ್‌ ಶುಭಾಶಂಸನೆಗೈದರು.

ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್‌, ಅಕಾಡೆಮಿ ರಿಜಿಸ್ಟ್ರಾರ್‌ ಮನೋಹರ ಕಾಮತ್‌, ಗೌರವ ಸಲಹೆಗಾರ ಕುಯಿಲಾಡಿ ಸುರೇಶ್‌ ನಾಯಕ್‌, ನಗರಸಭೆ ಆಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ವೇ|ಮೂ| ಚೇಂಪಿ ರಾಮಚಂದ್ರ ಅನಂತ ಭಟ್‌, ವಸಂತ ನಾಯಕ್‌, ವೆರೋನಿಕಾ ಕರ್ನೇಲಿಯೋ, ಮಾಧವ ಖಾರ್ವಿ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿ, ಪ್ರಧಾನ ಸಂಚಾಲಕಿ ಪೂರ್ಣಿಮಾ ಸುರೇಶ್‌ ಪ್ರಸ್ತಾವನೆಗೈದರು. ಸಾಣೂರು ನರಸಿಂಹ ಕಾಮತ್‌ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಅಮೃತ್‌ ಶೆಣೈ ವಂದಿಸಿದರು.

ಪುಸ್ತಕಗಳ ಬಿಡುಗಡೆ :

ಅಕಾಡೆಮಿಯಿಂದ ಪ್ರಕಟಿಸಲ್ಪಟ್ಟ ಕಾಣಿಯಾಂಚೊ ತುರೊ (ವಾಲ್ಟರ್‌ ರೊಸೆರಿಯೊ), ಗಲಿವರಾಜೊ ಪ್ರವಾಸ್‌ (ಜೆ.ಎಫ್. ಡಿ’ಸೋಜಾ), ಗಜಬಜೋ (ಸೀಮಾ ಕಾಮತ್‌), ಅಪಾಲಿಪಾ (ಪೆಲ್ಸಿ ಲೋಬೋ), ಬೆಗಾ¡ಂಚಿಂ ಲ್ಹಾರಂ (ಚಾರ್ಲ್ಸ್‌

ಡಿ’ಸೋಜಾ) ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಊಟೋಪಚಾರದ ವ್ಯವಸ್ಥೆಗೊಳಿಸಿದ ಉಪಾಧ್ಯಕ್ಷ ಗಣೇಶ್‌ ನಾಯಕ್‌ ಶಿರಿಯಾರ-ಕಲ್ಮರ್ಗಿ ಅವರನ್ನು ಅಭಿನಂದಿಸಲಾಯಿತು. ಗಣೇಶ್‌ ಪ್ರಸಾದ್‌ ಜಿ. ನಾಯಕ್‌ ಸಂಪಾದಕತ್ವದ ಉಡುಪಿ ಬುಲೆಟಿನ್‌ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಹಾವ್‌ ಕೊಂಕಣಿ ಉಲ್ಲೆತಾ… :

ನಾನು ಬಾಲ್ಯದಿಂದಲೇ ಕೊಂಕಣಿ ಭಾಷಿಗರೊಂದಿಗೆ ಬೆಳೆದವನು.  “ಹಾವ್‌ ಆಜ್‌ ಕೊಂಕಣಿ ಉಲ್ಲೆತಾನಾ ಪುಡ್ಜೆ ವರ್ಷ್‌ ಹಾವ್‌ ಕೊಂಕಣಿ ಉಲ್ಲೆತಾ’ (ನಾನು ಇಂದು ಕೊಂಕಣಿಯಲ್ಲಿ ಮಾತನಾಡುವುದಿಲ್ಲ, ಮುಂದಿನ ವರ್ಷ ಕೊಂಕಣಿಯಲ್ಲಿಯೇ ಮಾತನಾಡುತ್ತೇನೆ) ಎಂದು ಸಚಿವ ಶ್ರೀನಿವಾಸ ಪೂಜಾರಿ ಕೊಂಕಣಿ ಭಾಷಾ ಪ್ರೇಮ ಮೆರೆದರು.

ಮಣಿಪಾಲದ ಪ್ರಸಿದ್ಧಿಗೆ ಕೊಂಕಣಿ ಭಾಷಿಗರು ಕಾರಣ :

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದವರು ಡಾ| ಟಿಎಂಎ ಪೈ ಮತ್ತು ಟಿಎ ಪೈಗಳು. ಮಣಿಪಾಲದಲ್ಲಿ ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಗೆ ಹೆಸರು ಗಳಿಸುವಂತೆ ಮಾಡಿದ ಅವರು ಕೊಂಕಣಿ ಭಾಷಿಗರು ಎನ್ನುವುದಕ್ಕೆ ಅತ್ಯಂತ ಹೆಮ್ಮೆಯಾಗುತ್ತದೆ. ಕೋಟ ಶ್ರೀನಿವಾಸ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next