Advertisement

ದಸರಾ ಉದ್ಘಾಟನೆ: ಸಾಲುಮರದ ತಿಮ್ಮಕ್ಕನ ಆಯ್ಕೆಗೆ ಸಾಮಾಜಿಕ ಜಾಲತಾಣ ಅಭಿಯಾನ

03:58 PM Sep 21, 2021 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಏತನ್ಮಧ್ಯೆ ಈ ಬಾರಿಯ ದಸರಾ ಉದ್ಘಾಟಕರಾಗಿ ಪರಿಸರವಾದಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡುವ ಕುರಿತ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಕಳೆದ ವರ್ಷ ಮೈಸೂರು ದಸರಾವನ್ನು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ.ಸಿ.ಎನ್.ಮಂಜುನಾಥ್ ಅವರು ನೆರವೇರಿಸಿದ್ದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಡಾ.ಮಂಜುನಾಥ್ ಅವರ ಆಯ್ಕೆ ನಡೆದಿತ್ತು. ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಉದ್ಘಾಟಕರ ನೇಮಕದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಲುಮರದ ತಿಮ್ಮಕ್ಕ ಅವರನ್ನು ಈ ಬಾರಿ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದರೆ ಹೇಗೆ ಎಂಬ ಅಭಿಯಾನಕ್ಕೆ ಸಾವಿರಾರು ಮಂದಿ ಬೆಂಬಲಿಸಿ ಕಮೆಂಟ್ ಮಾಡಿದ್ದು, ಅದರಲ್ಲಿ ಆಯ್ದ ಕೆಲವು ಕಮೆಂಟ್ ಗಳು ಇಲ್ಲಿವೆ…

“ಮರಗಳನ್ನು ಹೆತ್ತ ಮಕ್ಕಳಂತೆ ಕಂಡ ಮಹಾತಾಯಿ ನಮ್ಮ ಸಾಲುಮರದ ತಿಮ್ಮಕ್ಕನವ್ರು. ಇವರು ನಮ್ಮ ನಾಡಹಬ್ಬ ದಸರಾ ಉದ್ಘಾಟನೆ ಮಾಡಿದ್ರೆ. ಅದರ ಘಟತೆ ಇನ್ನೂ ಇಮ್ಮಡಿಯಾಗುತ್ತೆ. ಅರ್ಹ ವ್ಯಕ್ತಿ” ಎಂಬುದಾಗಿ ರಾಜಶ್ರೀ ಢವಳೆ ಎಂಬವರು ಫೇಸ್ ಬುಕ್ ಕಮೆಂಟ್ ನಲ್ಲಿ ತಿಳಿಸಿದ್ದಾರೆ.

‘ಅರ್ಹ ಮತ್ತು ಸೂಕ್ತ ವ್ಯಕ್ತಿ. ದಸರಾ ಹಬ್ಬಕ್ಕೂ ಮೆರಗು” ಎಂದು ಮತ್ತೊಬ್ಬ ಓದುಗರಾದ ಶಿವಕುಮಾರ್ ದೊಡ್ಮನಿ ತಿಳಿಸಿದ್ದಾರೆ. ಪರಿಸರ ಬಗ್ಗೆ ಅಪಾರ ಗೌರವವಿದೆ. ಹಾಗೂ ಅವರ ಕೊಡುಗೆ ಕರ್ನಾಟಕಕ್ಕೆ ಅಪಾರ. ನಿಜವಾದ ದೇವರು ಅವರಿಂದ ಉದ್ಘಾಟನೆ ಮಾಡಿ.ನಾಡಪ್ರೇಮ, ದೇಶಪ್ರೇಮ”ಕ್ಕೆ ಇವರೇ ಸಾಟಿ” ಎಂದು ಆನಂದ್ ಎಚ್ ಆರ್ ಎಂಬ ಓದುಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಈ ಬಾರಿ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 7ರಂದು ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ಸಿಗಲಿದೆ. ಅಕ್ಟೋಬರ್ 15ರಂದು ವಿಜಯದಶಮಿ ದಿನ ಸಂಜೆ 4.36 ರಿಂದ 4.46ರವರೆಗೆ ನಂದಿಧ್ವಜ ಪೂಜೆ ನಡಯಲಿದೆ. 5ರಿಂದ 5.30ರೊಳಗೆ ಜಂಬೂ ಸವಾರಿ ನಡೆಯಲಿದ್ದು, ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next