ಬಂಟ್ವಾಳ: ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿ ಸಂಘಗಳು ಚೈತನ್ಯ ನೀಡಿವೆ. ಸ್ವಾಭಿಮಾನಿ ಹಾಗೂ ನೆಮ್ಮದಿಯ ಬದುಕಿನಲ್ಲಿ ಸಹಕಾರಿ ವ್ಯವಸ್ಥೆಯ ಪಾತ್ರ ಮಹತ್ವದ್ದು. ಸಹಕಾರ ಕ್ಷೇತ್ರದ ಬೆಳವಣಿಗೆಗೆ ರೈತರು ದೊಡ್ಡ ಮಟ್ಟದ ಕೊಡುಗೆ ನೀಡಿದ್ದು, ಹಿರಿಯರ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅವರು ಮಂಗಳವಾರ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ವಠಾರದಲ್ಲಿ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್, ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಬಂಟ್ವಾಳ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ 70ನೇ ಅಖೀಲ ಭಾರತ ಸಹಕಾರ ಸಪ್ತಾಹ -2023ರ ಅಂಗವಾಗಿ ನಡೆದ ದ.ಕ. ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸಹಕಾರಿ ಬ್ಯಾಂಕುಗಳು ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಸೇವೆ ನೀಡುತ್ತಿವೆ. ಸಹಕಾರಿ ಸಂಘಗಳು ಬ್ಯಾಂಕಿಂಗ್ ವ್ಯವಸ್ಥೆ ಜತೆಗೆ ಕೃಷಿ ಚಟುವಟಿಕೆಗೆ ಪೂರಕವಾಗಿ ಕೆಲಸ ಮಾಡಬೇಕಾದ ಅನಿವಾರ್ಯ ಇದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮೆರವಣಿಗೆ ಉದ್ಘಾಟಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಉಪನ್ಯಾಸ ನೀಡಿದರು.
ದ.ಕ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಸ್ಯಾRಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಕ್ಯಾಂಪ್ಕೋ ನಿರ್ದೇಶಕ ಎಸ್.ಆರ್. ಸತೀಶ್ಚಂದ್ರ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ’ಸೋಜಾ, ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ಸುಧೀರ್ ಕುಮಾರ್, ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮಂಚಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ ಜಿ.ಎಂ., ಇರಾ ಗ್ರಾ.ಪಂ. ಅಧ್ಯಕ್ಷ ಉಮ್ಮರ್ ಎಂ.ಬಿ., ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್.ಜೆ., ಸಹಕಾರ ಸಂಘಗಳ ವಲಯ ಮೇಲ್ವಿಚಾರಕ ಯೋಗೀಶ್ ಎಚ್., ಪ್ರಮುಖರಾದ ಸವಿತಾ ಶೆಟ್ಟಿ, ಸಹಕಾರಿ ಯೂನಿಯನ್ ಸಿಇಒ ಎಸ್.ವಿ. ಹಿರೇಮಠ, ಮಂಚಿ ಸಂಘದ ಉಪಾಧ್ಯಕ್ಷ ವಿಶ್ವನಾಥ ನಾಯ್ಕ ಎನ್., ಸಿಇಒ ನಾರಾಯಣ ಪಿ., ನಿರ್ದೇಶಕರಾದ ಅಬ್ದುಲ್ ರಹಿಮಾನ್, ಭಾಗೀರಥಿ ಎಂ, ಮೋಹನದಾಸ ಶೆಟ್ಟಿ, ಕೇಶವ ರಾವ್ ಎನ್., ಸುಧಾಕರ ರೈ, ನಿಶ್ಚಲ್ ಜಿ. ಶೆಟ್ಟಿ, ದೇವಿಪ್ರಸಾದ್ ಎಂ., ಫಿಲೋಮಿನಾ, ಸಂಧ್ಯಾಕುಮಾರಿ ವೇದಿಕೆಯಲ್ಲಿದ್ದರು.
ಸಮ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಇರಾ ನೇಮು ಪೂಜಾರಿ, ಬಾಲಾಜಿಬೈಲು ವಿಠಲ ರೈ, ಮೋಂತು ಅಲುºಕರ್ಕ್, ಸಿ.ಎಚ್. ಮಹಮ್ಮದ್, ಯುವಕ ಮಂಡಲ ಇರಾ ಹಾಗೂ ಭಾರತ್ ಫ್ರೆಂಡ್ಸ್ ಕ್ಲಬ್ ಇರಾದ ಅಧ್ಯಕ್ಷರು, ಮಂಚಿ ಸಂಘದ ನಿವೃತ್ತ ಸಿಇಒಗಳಾದ ವೆಂಕಟೇಶ್ ಪ್ರತಾಪ್ ಪಿ., ರವೀಂದ್ರ ಶೆಟ್ಟಿ, ರಾಮಕೃಷ್ಣ ಭಟ್ ಕಜೆ, ಮಾಜಿ ಅಧ್ಯಕ್ಷರಾದ ಪಿ.ಎಂ. ಕೊಡಂಗೆ, ಸಾಯಿನಾಥ ಪೂಂಜ, ಕೈಯ್ಯೂರು ನಾರಾಯಣ ಭಟ್, ಚಂದ್ರಹಾಸ ಕರ್ಕೇರ, ನವೋದಯ ಸಂಘದ ಪ್ರೇರಕಿ ತುಳಸಿ ಪಿ. ಅವರನ್ನು ಗೌರವಿಸಲಾಯಿತು.
ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ. ಉಮ್ಮರ್ ಸ್ವಾಗತಿಸಿ, ನಿರ್ದೇಶಕ ಚಂದ್ರಹಾಸ ಕರ್ಕೇರ ಪ್ರಸ್ತಾವನೆಗೈದರು. ನಿರ್ದೇಶಕ ದಿವಾಕರ ನಾಯಕ್ ವಂದಿಸಿದರು. ಮಂಚಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಒ ಪುಷ್ಪರಾಜ್ ಕುಕ್ಕಾಜೆ ಹಾಗೂ ಮುತ್ತಯ್ಯ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು.