Advertisement

ಕೋವಿಡ್‌-19 ಸ್ಕ್ರೀನಿಂಗ್‌ ಲ್ಯಾಬ್‌ ಉದ್ಘಾಟನೆ

06:37 AM May 27, 2020 | Suhan S |

ಕೊಪ್ಪಳ: ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೀವಶಾಸ್ತ್ರ ವಿಭಾಗದಲ್ಲಿ ಕೋವಿಡ್‌-19 ಸ್ಕ್ರೀನಿಂಗ್‌ ಪರೀಕ್ಷೆ ಪ್ರಯೋಗಾಲಯವನ್ನು ಸಂಸದ ಸಂಗಣ್ಣ ಕರಡಿ ಮಂಗಳವಾರ ಉದ್ಘಾಟಿಸಿದರು.

Advertisement

ವಿಭಾಗದ ಪ್ರಾಧ್ಯಾಪಕ ಡಾ| ಮಂಜುನಾಥ ಸಾಲಿಮನಿ ಮಾತನಾಡಿ, ಕೋವಿಡ್‌-19 ಸ್ಕ್ರೀನಿಂಗ್‌ (ಟ್ರೋನ್ಯಾಟ್‌) ಪರೀಕ್ಷೆ ಕೇವಲ ಕೋವಿಡ್‌-19 ನೆಗೆಟಿವ್‌ ಫಲಿತಾಂಶವನ್ನು ಮಾತ್ರ ದೃಢೀಕರಿಸುತ್ತದೆ. ಕೋವಿಡ್‌-19 ಪಾಸಿಟಿವ್‌ ಫಲಿತಾಂಶವನ್ನು ಆರ್‌ಟಿಪಿಸಿಆರ್‌ ಪರೀಕ್ಷೆ ಮೂಲಕ ದೃಢೀಕರಣಗೊಳಿಸಬೇಕಾಗಿರುತ್ತದೆ. ಪ್ರತಿದಿನ 40ರಿಂದ 45 ಪರೀಕ್ಷೆ ಮಾಡಬಹುದು. ಕಿಮ್ಸ್‌ ಸಂಸ್ಥೆಯ ಮಿಣಿ ಜೀವಶಾಸ್ತ್ರ ವಿಭಾಗದಲ್ಲಿ ವೈರಾಣು ಸಂಶೋಧನೆ ಹಾಗೂ ರೋಗನಿರ್ಣಯ ಪ್ರಯೋಲಯವು (ವಿಆರ್‌ ಡಿಎಲ್‌) ಮುಕ್ತಾಯದ ಹಂತದಲ್ಲಿದ್ದು, ಈ ಮಾಸಂತ್ಯಕ್ಕೆ ಕಾರ್ಯಾರಂಭವಾಗಲಿದೆ.

ವೈರಾಣು ಸಂಶೋಧನೆ ಹಾಗೂ ರೋಗ ನಿರ್ಣಯ ಪ್ರಾಯೋಗಾಲಯದಲ್ಲಿ ಆರ್‌ಟಿಪಿಸಿಆರ್‌ ವಿಧಾನ ಮೂಲಕ ಕೋವಿಡ್‌-19 ಪರೀಕ್ಷೆ ಮಾಡಲಾಗುತ್ತದೆ. ಆರ್‌ಟಿಪಿಸಿಆರ್‌ ವಿಧಾನದ ಮೂಲಕ ಕೋವಿಡ್‌-19 ಪಾಸಿಟಿವ್‌ ಮತ್ತು ನೆಗೆಟಿವ್‌ ಪ್ರಕರಣಗಳನ್ನು ದೃಢೀಕರಿಸಿಕೊಳ್ಳಬೇಕಾಗಿರುತ್ತದೆ. ಆರ್‌ಟಿಪಿಸಿಆರ್‌ ಪರೀಕ್ಷೆ ಮೂಲಕ ದೃಢೀಕರಣ ಗೊಳಿಸಬೇಕಾಗಿರುತ್ತದೆ. ಪ್ರತಿದಿನ 140-150 ಪರೀಕ್ಷೆ ಮಾಡಬಹುದು ಎಂದರು.

ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್‌ ಬಯ್ನಾಪೂರ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next