Advertisement
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೆಂಗಳೂರು ಸೇರಿದಂತೆ ನಮ್ಮ ನಗರಗಳಲ್ಲಿ ಇನ್ನು ಕೆಲವೇ ವರ್ಷಗಳವರೆಗೆ ಸಂಚಾರ ವ್ಯವಸ್ಥೆ ಬದಲಾಗಲಿದ್ದು, ಪರಿಸರಸ್ನೇಹಿ ವಾಹನಗಳು ರಸ್ತೆಗಿಳಿಯಲಿವೆ. ಈ ಪರಿವರ್ತನೆಯಲ್ಲಿ ಕಾಂಟಿನೆಂಟಲ್ ಕಂಪನಿಯು ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.
Related Articles
Advertisement
ಕಾರ್ಯಕ್ರಮದಲ್ಲಿ ಜರ್ಮನಿಯ ಕಾನ್ಸುಲ್ ಜನರಲ್ ಅಕಿಂ ಬರ್ಕಾರ್ಟ್, ಕಾಂಟಿನೆಂಟಲ್ ಕಂಪನಿಯ ಭಾರತ ಘಟಕದ ಅಧ್ಯಕ್ಷ ಹಾಗೂ ಸಿಇಒ ಪ್ರಶಾಂತ್ ದೊರೆಸ್ವಾಮಿ, ಕಂಪನಿಯ ತಾಂತ್ರಿಕ ಕೇಂದ್ರದ ಮುಖ್ಯಸ್ಥೆ ಲತಾ ಚೆಂಬ್ರಕಳಂ ಮುಂತಾದವರು ಉಪಸ್ಥಿತರಿದ್ದರು.
ಸೆನ್ಸರ್ ಕಾರಿನಲ್ಲಿ ಮುದ ಅನುಭವಿಸಿದ ಸಚಿವರುಸಚಿವ ಅಶ್ವತ್ಥ ನಾರಾಯಣ ಅವರು ಕಾಂಟಿನೆಂಟಲ್ ಇಂಡಿಯಾ ಕಂಪನಿಯ ಆವರಣದಲ್ಲಿ, ಸಂಪೂರ್ಣವಾಗಿ ಸೆನ್ಸರ್ ಆಧಾರದ ಮೇಲೆ ಕೆಲಸ ಮಾಡುವ ಕಾರಿನಲ್ಲಿ ಒಂದು ಸುತ್ತು ಹಾಕಿ, ಮುದ ಅನುಭವಿಸಿದರು. ಸ್ಟಿಯರಿಂಗ್ ಅನ್ನು ಮುಟ್ಟಬೇಕಿಲ್ಲದ, ಎದುರುಗಡೆ ವಾಹನ ಬಂದರೆ ತಾನಾಗಿಯೇ ನಿಲ್ಲುವ, ಸಂಚಾರ ದಟ್ಟಣೆಗೆ ತಕ್ಕಂತೆ ತನ್ನ ವೇಗವನ್ನು ತಾನೇ ನಿರ್ಧರಿಸಿಕೊಳ್ಳುವ ಈ ಕಾರ್ ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಕಂಡು ಅವರು ರೋಮಾಂಚಿತರಾದರು. ಕಾಂಟಿನೆಂಟಲ್ ಕಂಪನಿಯ ಭಾರತದ ಅಧ್ಯಕ್ಷ ಹಾಗೂ ಸಿಇಒ ಪ್ರಶಾಂತ್ ದೊರೆಸ್ವಾಮಿ ಅವರು ಈ ವಿಶೇಷ ಕಾರನ್ನು ಚಾಲನೆ ಮಾಡಿದರು. ಈ ಬಗ್ಗೆ ಮಾತನಾಡಿದ ಅವರು, “ಇಂತಹ ಕಾರುಗಳು ಆಧುನಿಕ ಜೀವನ ಶೈಲಿಯಲ್ಲಿ ವರದಾನವಾಗಲಿವೆ. ಇದರಿಂದ ಮಾಲಿನ್ಯ ಇತ್ಯಾದಿ ಸಮಸ್ಯೆಗಳು ಸಹ ಇಲ್ಲ. ಜತೆಗೆ ಮನುಷ್ಯನ ಸಮಯ ಇದರಿಂದ ಉಳಿಯುತ್ತದೆ” ಎಂದರು.