ಮಾದನಹಿಪ್ಪರಗಿ: 2020-21ನೇ ಸಾಲಿನ ಎಸ್‌ಡಿಪಿ ಯೋಜನೆಯಡಿ ಸಮೀಪದ ಹಳ್ಳಕ್ಕೆ ನಿರ್ಮಿಸಿದ ಸೇತುವೆಯನ್ನು ಶಾಸಕ ಸುಭಾಷ ಆರ್. ಗುತ್ತೇದಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೋವಿಡ್ 19 ನಿಂದಾಗಿ ಅನುದಾನ ಬಿಡುಗಡೆಯಲ್ಲಿ ಸ್ವಲ್ಪ ವಿಳಂಭವಾಗುತ್ತಿದೆ. ಆದರೂ ಮಾದನಹಿಪ್ಪರಗಿ ಗ್ರಾಮದಿಂದ ಶಿವಲಿಂಗೇಶ್ವರ ಪದವಿ ಕಾಲೇಜಿನ ವರೆಗೆ 1ಕೋಟಿ 72 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದೆ. ಈಗ ಉದ್ಘಾಟಿಸಿದ ಸೇತುವೆಗೆ 1 ಕೋಟಿ 08 ಲಕ್ಷ ರೂ. ಖರ್ಚಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಎಸ್‌ಡಿಪಿ ಯೋಜನೆಯಡಿ ಜಿಡಗಾ ಕ್ರಾಸ್‌ದಿಂದ ಗ್ರಾಮದ ಪದವಿ ಕಾಲೇಜಿನ ವರೆಗೆ 9 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಆಗಲಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶಿವಲಿಂಗೇಶ್ವರ ಮಠದ ಪೀಠಾಧಿ ಪತಿ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಗ್ರಾಮಗಳಿಂದ ನಗರ ಪ್ರದೇಶಗಳಿಗೆ ಸುಂದರವಾದ ರಸ್ತೆಗಳು ನಿರ್ಮಾಣವಾದರೆ ಅಭಿವೃದ್ಧಿ ಸಾಧ್ಯ ಎಂದರು.
ಗ್ರಾಪಂ ಉಪಾಧ್ಯಕ್ಷ ಚೆನ್ನಪ್ಪ ಹಾಲೇನವರ್, ಪಿಎಸ್‌ಐ ಮಲ್ಲಣ್ಣ ಯಲಗೋಡ, ಲೋಕೋಪಯೋಗಿ ಇಲಾಖೆ ಎಇಇ ಇರಣ್ಣ ಕುಣಗೇರಿ, ಜೆಇ ಕರಬಸಪ್ಪ, ಮಲ್ಲಿನಾಥ ದುಧªಗಿ, ಸಾತಪ್ಪ ಕೋಳಶೆಟ್ಟಿ , ಮುಖಂಡರಾದ ಲಿಂಗರಾಜ ಉಡಗಿ, ಸಿದ್ದರಾಮ ತೋಳನೂರ, ಶರಣಬಸಪ್ಪ ಜಿಡ್ಡಿಮನಿ, ಶಿವಾನಂದ ಪಾಟೀಲ, ಮಲ್ಲಿನಾಥ ಪರೇಣಿ, ಶಿವಲಿಂಗಪ್ಪ ಕಬಾಡಗಿ, ಸುಧಾ ಸಮತಾಜೀವನ, ಪ್ರೇಮಾ ಕಟ್ಟಿಮನಿ, ಶಿವಲಿಂಗಪ್ಪ ಮೈಂದರಗಿ ಮತ್ತಿತರರು ಇದ್ದರು.