Advertisement

ಅಂಬರೀಶ್‌ ರಸ್ತೆ ನಾಮಫಲಕಕ್ಕೆ ಚಾಲನೆ

05:14 AM May 30, 2020 | Lakshmi GovindaRaj |

ಭಾರತೀನಗರ: ಜಿಲ್ಲೆಯ ಜನತೆ ಅಂಬರೀಶ್‌ ಮೇಲಿಟ್ಟಿರುವ ಅಭಿಮಾನವೇ ಇಂದು ನನ್ನನ್ನು ಸಂಸದೆಯನ್ನಾಗಿ ಮಾಡಿದೆ ಎಂದು ಸಂಸದೆ ಸುಮಲತಾ ತಿಳಿಸಿದರು. ಹೋಬಳಿಯ ಮದ್ದೂರು-ಮಳವಳ್ಳಿ ಹೆದ್ದಾರಿಯ ಮುಟ್ಟನಹಳ್ಳಿ  ಗೇಟ್‌ನಲ್ಲಿ ರಸ್ತೆಗೆ ಅಂಬರೀಶ್‌ ನಾಮಫ‌ಲಕವನ್ನು ಉದ್ಘಾಟಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಜನತೆಯ ಋಣವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದರು.

Advertisement

ಮುಟ್ಟನಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ  ಸಲ್ಲಿಸಿದ ಬಳಿಕ ಅಂಬರೀಶ್‌ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ಸಸಿ ವಿತರಿಸಲಾಯಿತು. ಈ ವೇಳೆ ಚಿತ್ರನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌, ಪುತ್ರ ಅಭಿಷೇಕ್‌ಗೌಡ, ಜಿಪಂ ಸದಸ್ಯ ರಾಜೀವ್‌, ಬೇಲೂರು ಸೋಮಶೇಖರ್‌,  ಮುಟ್ಟನಹಳ್ಳಿ ಮಹೇಂದ್ರ, ಚಂದ್ರಶೇಖರ್‌, ಕುಮಾರ್‌, ಚಂದ್ರಶೇಖರ್‌, ಶಿವಣ್ಣ ಇತರರಿದ್ದರು.

ಅಂಬಿ ಸ್ಮಾರಕಕ್ಕೆ ಪೂಜೆ: ಸಮೀಪದ ದೊಡ್ಡರಸಿನಕೆರೆಯಲ್ಲಿ ಅಭಿಮಾನಿಗಳು ನಿರ್ಮಿಸಿರುವ ಅಂಬರೀಶ್‌ ಸ್ಮಾರಕಕ್ಕೆ ಸಂಸದೆ ಸುಮಲತಾ ಮತ್ತು ಪುತ್ರ ಅಭಿಷೇಕ್‌ಗೌಡ ಭೇಟಿ ನೀಡಿ ಪೂಜೆ ಸಲ್ಲಿಸಿ ಕೆಲ ಕ್ಷಣ ಭಾವುಕರಾದರು.  ಅಭಿಮಾನಿಗಳ ಒತ್ತಾಯದ ಮೇರೆಗೆ ಅಂಬಿ ಸರ್ಕಲ್‌ಗೆ ಭೇಟಿ ನೀಡಿ ಅಂಬರೀಶ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬಳಿಕ ಇತ್ತೀಚೆಗೆ ನಿಧನ ಹೊಂದಿದ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಟ್ರಸ್ಟ್‌ ಅಧ್ಯಕ್ಷ ಜೋಗಿಗೌಡ ಮನೆಗೆ ಭೇಟಿ ನೀಡಿ  ಕುಟುಂಬಕ್ಕೆ ಸಾಂತ್ವನ ಹೇಳಿದರು. ದೇವಸ್ಥಾನದ ಅತಿಥಿ ಗೃಹದಲ್ಲಿ ಉಪಹಾರ ಸೇವಿಸಿದರು. ದೊಡ್ಡರಸಿನಕೆರೆ ಗ್ರಾಮದ ರಘು, ರಮೇಶ್‌, ಡೈರಿ ಶಿವು, ಹುಚ್ಚೇಗೌಡ, ಸಿದ್ದೇಗೌಡ, ಜ್ಯೋತಿಕುಮಾರ್‌, ಚಿಕ್ಕರಸಿನಕೆರೆ ಶಿವಲಿಂಗೇಗೌಡ  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next