ಕಲಬುರಗಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾರ್ಯಾಲಯ ನಗರದ ಸರದಾರ ವಲ್ಲಭ ಭಾಯಿ ಪಟೇಲ ವೃತ್ತ ಹತ್ತಿರದ ತಿಮ್ಮಾಪೂರ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಅಟೋ ಡ್ರೈವರ್‌ಗಳ ಮುಖಾಂತರ ಉದ್ಘಾಟಿಸಲಾಯಿತು.
ಆಮ್ ಆದ್ಮಿ ಸದಸ್ಯರು ಹಾಗೂ ಆಟೋ ಚಾಲಕರಾದ ರೀಯಾಜ್ ಹಾಗೂ ಸುರೇಶ ಕಚೇರಿಯನ್ನು ಉದ್ಘಾಟಿಸುವದರೊಂದಿಗೆ ಜನಸೇವೆಗೆ ಲೋಕಾರ್ಪಣೆಗೊಳಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರ ವಿಜಯ ಶರ್ಮಾ ಈ ಸಂದರ್ಭದಲ್ಲಿ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರ ಈ ಕಚೇರಿ ಕೇವಲ ಪ್ರಚಾರಕ್ಕಾಗಿ ಅಲ್ಲ ಅದು ಕ್ರಾಂತಿಯನ್ನೇ ಮಾಡುವ ಕಾರ್ಯಾಲಯವಾಗಲಿದೆ ಎಂದು ಭವಿಷ್ಯ ನುಡಿದರು.
ಪಕ್ಷದ ಮುಖಂಡರಾದ ಹಾಗೂ ದಕ್ಷಿಣ ಮತಕ್ಷೇತ್ರದ ಉಸ್ತುವಾರಿಗಳಾದ ಸಿದ್ದು ಪಾಟೀಲ ತೇಗನೂರ ಮಾತನಾಡಿ, ಸಾರ್ವಜನಿಕರ ಯಾವುದೇ ಕುಂದು ಕೊರತೆಗಳು ಇರಲಿ, ಆಮ್ ಆದ್ಮಿ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಬಹುದಾಗಿದೆ. ಅಭಿವೃದ್ಧಿ ಕಾರ್ಯಾ ನಿರೀಕ್ಷೆ ಮಟ್ಟದಲ್ಲಿ ಆಗುತ್ತಿಲ್ಲ ಎನ್ನುವದು ಮತದಾರರ ಅನಿಸಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಪ್ರತಿ ವಾರ್ಡ್, ಹೋಬಳಿ ಹಾಗೂ ಹಳ್ಳಿಗಳ ಮೂಲಭೂತ ಸಮಸ್ಯೆಗಳ ನಿರ್ವಾಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಭ್ರಷ್ಟಾಚಾರವನ್ನು ತಡಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಪಕ್ಷದ ನಗರಾಧ್ಯಕ್ಷ ಸಜ್ಜಾದ ಅಲಿ ಇನಾಂದಾರ, ಮುಖಂಡರಾದ ಅರವಿಂದ ಹಿರೇಮಠ, ಸಾಗರ, ಕಿರಣ ರಾಠೊಡ, ಮೊಹಿಶಿನ್, ಉದಯ ಬಳ್ಳಾರಿ, ಸಿದ್ದು ಕೋಗನೂರ, ಬಸವರಾಜ ತೇಲಕರ್, ಆಫ್ರಾಜ್, ಜಗದೀಶ ಸಚಿನ್, ಶಿವಕುಮಾರ ಕಾಂಬಳೆ, ಇಮ್ರಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.