ಹಳೆಯಂಗಡಿ: ಇಲ್ಲಿನ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಲಯನ್ಸ್ ಕ್ಲಬ್‌ನ ಪಾತ್ರ ಹಿರಿದಾಗಿದೆ. 8 ವರ್ಷದ ಅವ ಧಿಯಲ್ಲಿ 80 ಲಕ್ಷಕ್ಕೂ ಮಿಕ್ಕ ಸೇವಾ ಯೋಜನೆಗಳನ್ನು ನೀಡಿರುವುದು ಶ್ಲಾಘನೀಯ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಕೇಂದ್ರ ಪ್ರದೇಶದಲ್ಲಿ ಜ.4ರಂದು ಹಳೆಯಂಗಡಿ ಲಯನ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಸ್ ತಂಗುದಾಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಕ್ಲಬ್ ಅಧ್ಯಕ್ಷ ವಾಸು ನಾಯಕ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಎಚ್. ಆರ್. ಹರೀಶ್ ಮಾತನಾಡಿ, ಸೇವೆಯ ಮೂಲಕವೇ ಜನರಿಗೆ ಹತ್ತಿರವಾಗಿರುವ ಲಯನ್ಸ್ ಕ್ಲಬ್ ಹೆಚ್ಚು ಗ್ರಾಮೀಣ ಭಾಗದಲ್ಲಿ ವಿಸ್ತರಣೆ ಆಗುತ್ತಿದೆ. ವಿವಿಧತೆಯಲ್ಲಿ ಏಕತೆ ಕಾಣುವ ಸಾಮರಸ್ಯದ ಸೇವೆ ಇಂದಿನ ದಿನದಲ್ಲಿ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು, ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್‌ನ ಸಭಾಪಾಲಕರಾದ ರೆ| ಸೆಬಾಸ್ಟಿನ್ ಜತ್ತನ್ನ, ಬೊಳ್ಳೂರು ಮಸೀದಿಯ ಅಲ್‌ಹಜ್ ಮಹಮ್ಮದ್ ಅಝ್ಹರ್ ಫೈಝಿ ಶುಭಹಾರೈಸಿದರು. ಹಳೆಯಂಗಡಿ ಗ್ರಾ.ಪಂ., ರೆ.ಜಿ.ಎ. ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಾಗೂ ಮಂಗಳೂರಿನ ಸಿಲಾ ಎಡ್ವಟೈಸರ್ ಸಂಸ್ಥೆಗಳು ತಂಗುದಾಣ ನಿರ್ಮಾಣಕ್ಕೆ ಸಹಕರಿಸಿದ್ದರಿಂದ, ಸಂಸ್ಥೆಗಳನ್ನು ಗೌರವಿಸಲಾಯಿತು.
ಹಳೆಯಂಗಡಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಚಂದ್ರಶೇಖರ ನಾನಿಲ್, ಲಿಯೋ ಸ್ಥಾಪಕಾಧ್ಯಕ್ಷ ಪ್ರಜ್ವಲ್ ಪೂಜಾರಿ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾ ಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ರೆ.ಜಿ.ಎ.ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ರೊಲಾಂಡ್ ಪ್ರದೀಪ್ ಬೆರ್ನಾಡ್, ಕಿಲ್ಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಮಾಜಿ ಜಿ.ಪಂ. ಅಧ್ಯಕ್ಷೆ ಸುಗಂಧಿ ಕೊಂಡಾಣ, ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಸದಸ್ಯರಾದ ಅಬ್ದುಲ್ ಖಾದರ್, ಅನಿಲ್ ಸಸಿಹಿತ್ಲು, ಅಬ್ದುಲ್ ಅಝೀಜ್, ಹಮೀದ್ ಸಾಗ್, ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಕೇಶವ ದೇವಾಡಿಗ, ರಿಕ್ಷಾ ಯೂನಿಯನ್ ಅಧ್ಯಕ್ಷ ಚಂದ್ರಶೇಖರ ಕದಿಕೆ, ಉದ್ಯಮಿ ಶಶೀಂದ್ರ ಮುದ್ದು ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತೆಯರಾದ ವೀಣಾ ಕಾಮತ್, ನಂದಾ ಪಾಯಸ್, ಮೆಸ್ಕಾಂ ಸಲಹ ಸಮಿತಿಯ ಸದಸ್ಯ ಧರ್ಮಾನಂದ ಶೆಟ್ಟಿಗಾರ್ ತೋಕೂರು, ಲಯನ್ಸ್ ಕ್ಲಬ್‌ನ ಯಾದವ ದೇವಾಡಿಗ, ಮೆಲ್ವಿನ್ ಡಿ’ಸೋಜಾ, ರಮೇಶ್ ಬಂಗೇರ, ಬ್ರಿಜೇಶ್ ಕುಮಾರ್, ಶರತ್, ಯಶೋಧರ ಸಾಲ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ| ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗೈದರು. ಭಾಸ್ಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.